Hosea 11:6
ಆದದರಿಂದ ಅವರ ಆಲೋಚನೆಗಳ ನಿಮಿತ್ತ ಕತ್ತಿಯು ಅವರ ಪಟ್ಟಣಗಳ ಮೇಲೆ ನೆಲೆಯಾಗಿದ್ದು ಅಲ್ಲಿನ ಕೊಂಬೆ ಗಳನ್ನು ಸುಟ್ಟು ಅವರನ್ನು ನುಂಗಿಬಿಡುತ್ತದೆ.
Hosea 11:6 in Other Translations
King James Version (KJV)
And the sword shall abide on his cities, and shall consume his branches, and devour them, because of their own counsels.
American Standard Version (ASV)
And the sword shall fall upon their cities, and shall consume their bars, and devour `them', because of their own counsels.
Bible in Basic English (BBE)
And the sword will go through his towns, wasting his children and causing destruction because of their evil designs.
Darby English Bible (DBY)
and the sword shall turn about in his cities, and shall consume his bars, and devour [them], because of their own counsels.
World English Bible (WEB)
The sword will fall on their cities, And will consume their gate bars, And will put an end to their plans.
Young's Literal Translation (YLT)
Grievous hath been the sword in his cities, And it hath ended his bars, and consumed -- from their own counsels.
| And the sword | וְחָלָ֥ה | wĕḥālâ | veh-ha-LA |
| shall abide | חֶ֙רֶב֙ | ḥereb | HEH-REV |
| on his cities, | בְּעָרָ֔יו | bĕʿārāyw | beh-ah-RAV |
| consume shall and | וְכִלְּתָ֥ה | wĕkillĕtâ | veh-hee-leh-TA |
| his branches, | בַדָּ֖יו | baddāyw | va-DAV |
| and devour | וְאָכָ֑לָה | wĕʾākālâ | veh-ah-HA-la |
| own their of because them, counsels. | מִֽמֹּעֲצ֖וֹתֵיהֶֽם׃ | mimmōʿăṣôtêhem | mee-moh-uh-TSOH-tay-hem |
Cross Reference
Hosea 13:16
ಸಮಾರ್ಯವು ಹಾಳಾಗಿ ಹೋಗುವದು; ಅವಳು ತನ್ನ ದೇವರಿಗೆ ವಿರುದ್ಧವಾಗಿ ತಿರಿಗಿ ಬಿದ್ದಿದ್ದಾಳೆ; ಅವರೆಲ್ಲರೂ ಕತ್ತಿ ಯಿಂದ ಬೀಳುವರು; ಅವರ ಎಳೇ ಕೂಸುಗಳು ಚೂರು ಚೂರಾಗಿ ಬಡಿಯಲ್ಪಡುವವು; ಅವರ ಗರ್ಭಿಣಿಯರು ಸೀಳಲ್ಪಡುವರು.
Hosea 10:14
ನಿನ್ನ ಜನರಲ್ಲಿ ಗಲಭೆ ಉಂಟಾಗುವದು; ಶಲ್ಮಾನನು ಬೇತ್ ಅರ್ಬೇ ಲನ್ನು ನಾಶಮಾಡಿದ ಪ್ರಕಾರ ನಿನ್ನ ಕೋಟೆಗಳೆಲ್ಲಾ ನಾಶಮಾಡಲ್ಪಡುವವು; ತಾಯಿಯು ತನ್ನ ಮಕ್ಕಳ ಮೇಲೆ ಅಪ್ಪಳಿಸಿ ಪುಡಿಪುಡಿಯಾಗಿ ಮಾಡಲ್ಪಟ್ಟಳು.
Hosea 10:6
ಅದು ಸಹ ಅರಸ ನಾದ ಯಾರೇಬನಿಗೆ ಕಾಣಿಕೆಯಾಗಿ ಅಶ್ಯೂರಿಗೆ ಒಯ್ಯ ಲ್ಪಡುವದು; ಎಫ್ರಾಯಾಮು ನಾಚಿಕೆಯನ್ನು ಹೊಂದು ವದು; ಇಸ್ರಾಯೇಲ್ ಸಹ ತನ್ನ ಆಲೋಚನೆಗೆ ಅಸಹ್ಯ ಪಡುವದು.
Malachi 4:1
ಇಗೋ, ಆ ದಿನವು ಬರುತ್ತದೆ; ಅದು ಒಲೆಯ ಹಾಗೆ ಉರಿಯುವದು; ಆಗ ಗರ್ವಿಷ್ಠರೆಲ್ಲರೂ ಹೌದು, ಕೆಟ್ಟದ್ದನ್ನು ಮಾಡುವವ ರೆಲ್ಲರೂ ಹುಲ್ಲಿನಂತಿರುವರು; ಬರುವ ಆ ದಿನವು ಅವರನ್ನು ಸುಟ್ಟುಬಿಡುವದು; ಬೇರನ್ನಾದರೂ ಕೊಂಬೆ ಯನ್ನಾದರೂ ಅವರಿಗೆ ಬಿಡದು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
Micah 5:11
ನಿನ್ನ ದೇಶದ ಪಟ್ಟಣಗಳನ್ನು ಕಡಿದುಬಿಟ್ಟು ನಿನ್ನ ಕೋಟೆಗಳನ್ನೆಲ್ಲಾ ಕೆಡವಿಹಾಕುವೆನು.
Ezekiel 20:47
ದಕ್ಷಿಣದ ಅರಣ್ಯಕ್ಕೆ ಹೇಳಬೇಕಾದ ದ್ದೇನಂದರೆ--ಕರ್ತನ ವಾಕ್ಯವನ್ನು ಕೇಳು, ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನಿನ್ನಲ್ಲಿ ಬೆಂಕಿ ಹಚ್ಚುತ್ತೇನೆ; ಅದು ನಿನ್ನಲ್ಲಿರುವ ಎಲ್ಲಾ ಹಸೀ ಮರಗಳನ್ನು ಮತ್ತು ಎಲ್ಲಾ ಒಣಮರಗಳನ್ನು ತಿಂದುಬಿಡುವದು; ಉರಿಯುವ ಉರಿ ಆರಿಹೋಗು ವದಿಲ್ಲ; ದಕ್ಷಿಣ ಮೊದಲುಗೊಂಡು ಉತ್ತರದ ವರೆಗೂ ಎಲ್ಲಾ ಮುಖಗಳು ಅದರಲ್ಲಿ ಸುಟ್ಟು ಹೋಗುವವು.
Ezekiel 15:2
ಮನುಷ್ಯಪುತ್ರನೇ, ದ್ರಾಕ್ಷೇಗಿಡವು ಬೇರೆ ಗಿಡಗಳಿಗಿಂತಲೂ ಇಲ್ಲವೆ ಅಡವಿ ಯಲ್ಲಿರುವ ಮರಗಳ ಕೊಂಬೆಗಳಿಗಿಂತಲೂ ಹೆಚ್ಚೇನು?
Jeremiah 5:17
ನಿನ್ನ ಕುಮಾರರು, ಕುಮಾರ್ತೆಯರು ತಿನ್ನತಕ್ಕ ನಿನ್ನ ಪೈರನ್ನೂ ರೊಟ್ಟಿಯನ್ನೂ ತಿನ್ನುವರು, ಕುರಿಗಳನ್ನೂ ದನಗಳನ್ನೂ ತಿನ್ನುವರು, ದ್ರಾಕ್ಷೇ ಗಿಡ ಗಳನ್ನೂ ಅಂಜೂರದ ಗಿಡಗಳನ್ನೂ ತಿನ್ನುವರು. ನೀನು ನಂಬಿಕೊಂಡಿದ್ದ ಕೋಟೆಯುಳ್ಳ ಪಟ್ಟಣಗಳನ್ನು ಕತ್ತಿಯಿಂದ ಬಡವಾಗ ಮಾಡುವರು.
Isaiah 30:1
ಕರ್ತನು ಹೀಗೆ ಅನ್ನುತ್ತಾನೆ. ತಿರುಗಿ ಬೀಳುವ ಮಕ್ಕಳಿಗೆ ಅಯ್ಯೋ ಅವರು ಆಲೋಚನೆಯನ್ನು ಮಾಡುತ್ತಾರೆ, ಆದರೆ ನನ್ನಿಂದಲ್ಲ; ನನ್ನ ಆತ್ಮಪ್ರೇರಿತರಾಗದೆ ಉಪಾಯವನ್ನು ನೇಯ್ದು ಪಾಪದ ಮೇಲೆ ಪಾಪವನ್ನು ಸೇರಿಸಿಕೊಂಡಿದ್ದಾರೆ.
Isaiah 27:10
ಕೋಟೆಯ ಪಟ್ಟಣವಾಗಿದ್ದಾಗ್ಯೂ ಹಾಳಾಗಿ ಕಾಡಿನಂತೆ ಜನರಿಲ್ಲದೆ ಶೂನ್ಯ ನಿವಾಸಸ್ಥಾನವಾಗಿದೆ; ಅಲ್ಲಿ ಕರುಗಳು ಮೇದು ಮಲಗುವವು. ಅಲ್ಲಿನ ಚಿಗುರುಗಳನ್ನು ತಿಂದು ಬಿಡು ವವು.
Isaiah 18:5
ಸುಗ್ಗಿಗೆ ಮುಂಚೆ ಮೊಗ್ಗು ಬಿಟ್ಟಾದ ಮೇಲೆ ಹೂವಿನಲ್ಲಿ ದ್ರಾಕ್ಷೇ ಕಾಯಿಯಾಗುವಾಗ ಆತನು ಕುಡುಗೋಲುಗಳಿಂದ ಬಳ್ಳಿಗಳನ್ನು ಕತ್ತರಿಸಿ ಚಿಗುರುಗಳನ್ನು ಕಡಿದುಹಾಕು ವನು.
Isaiah 9:14
ಆದದರಿಂದ ಕರ್ತನು ಇಸ್ರಾಯೇಲಿನಿಂದ ತಲೆಬಾಲಗಳನ್ನೂ ಕೊಂಬೆ ರೆಂಬೆಗಳನ್ನೂ ಒಂದು ದಿನದಲ್ಲಿ ಕತ್ತರಿಸಿ ಹಾಕುವನು.
Psalm 106:43
ಬಹಳ ಸಾರಿ ಆತನು ಅವರನ್ನು ಬಿಡಿಸಿದನು; ಆದರೆ ಅವರು ತಮ್ಮ ಆಲೋಚನೆಯಿಂದ ಆತನಿಗೆ ಕೋಪವನ್ನೆಬ್ಬಿಸಿದರು. ತಮ್ಮ ಅಕ್ರಮದಿಂದ ಅವರು ಕುಗ್ಗಿಹೋದರು.
Psalm 106:39
ಹೀಗೆ ತಮ್ಮ ಕೆಲಸಗಳಿಂದ ತಮ್ಮನ್ನು ಹೊಲೆಮಾಡಿಕೊಂಡು, ತಮ್ಮ ಕ್ರಿಯೆಗಳಿಂದ ಜಾರರಾದರು.
Psalm 80:11
ಅದು ತನ್ನ ರೆಂಬೆಗಳನ್ನು ಸಮುದ್ರದ ವರೆಗೂ ತನ್ನ ಬಳ್ಳಿಗಳನ್ನು ನದಿಗೂ ಹರಡಿಸಿತು.
Deuteronomy 32:25
ಹೊರಗೆ ಕತ್ತಿಯೂ ಒಳಗೆ ಭಯವೂ ಪ್ರಾಯ ಸ್ಥನನ್ನೂ ಕನ್ನಿಕೆಯನ್ನೂ ನರೇಕೂದಲಿನವನ ಸಂಗಡ ಮೊಲೆ ಕೂಸನ್ನೂ ಸಂಹರಿಸುವವು.
Deuteronomy 28:52
ನಿನ್ನ ದೇಶದಲ್ಲೆಲ್ಲಾ ನೀನು ನಂಬಿಕೊಂಡಿರುವ ಉದ್ದವಾದ ಮತ್ತು ಭದ್ರವಾದ ನಿನ್ನ ಗೋಡೆಗಳೆಲ್ಲಾ ಬೀಳುವ ವರೆಗೆ ನಿನ್ನ ಎಲ್ಲಾ ಬಾಗಲುಗಳಲ್ಲಿ ನಿನಗೆ ಮುತ್ತಿಗೆ ಹಾಕುವದು; ನಿನ್ನ ದೇವರಾದ ಕರ್ತನು ನಿನಗೆ ಕೊಟ್ಟ ನಿನ್ನ ದೇಶದಲ್ಲೆಲ್ಲಾ ನಿನ್ನ ಎಲ್ಲಾ ಬಾಗಲುಗಳಲ್ಲಿ ನಿನಗೆ ಮುತ್ತಿಗೆಹಾಕುವನು.
Leviticus 26:33
ನಿಮ್ಮನ್ನು ಜನಾಂಗಗಳಲ್ಲಿ ಚದರಿಸಿ ನಿಮ್ಮ ಹಿಂದೆ ಕತ್ತಿಯನ್ನು ಬೀಸುವೆನು; ನಿಮ್ಮ ಭೂಮಿ ಹಾಳಾಗಿ ರುವದು; ನಿಮ್ಮ ಪಟ್ಟಣಗಳು ನಾಶವಾಗಿರುವವು.
Leviticus 26:31
ನಿಮ್ಮ ಪಟ್ಟಣಗಳನ್ನು ಕೆಡವಿಹಾಕಿ, ನಿಮ್ಮ ಪರಿಶುದ್ಧ ಸ್ಥಳಗಳನ್ನು ಹಾಳುಮಾಡಿ, ನಿಮ್ಮ ಸುವಾಸನೆ ಗಳನ್ನು ಮೂಸಿ ನೋಡದೆ ಇರುವೆನು.