ಙ್ಞಾನೋಕ್ತಿಗಳು 21:13 in Kannada

ಕನ್ನಡ ಕನ್ನಡ ಬೈಬಲ್ ಙ್ಞಾನೋಕ್ತಿಗಳು ಙ್ಞಾನೋಕ್ತಿಗಳು 21 ಙ್ಞಾನೋಕ್ತಿಗಳು 21:13

Proverbs 21:13
ಬಡವರ ಕೂಗಿಗೆ ತನ್ನ ಕಿವಿಗಳನ್ನು ಮುಚ್ಚಿಕೊಳ್ಳುವವನು ತಾನು ಕೂಗಿದಾಗ ಯಾರೂ ಅವನಿಗೆ ಉತ್ತರಕೊಡುವದಿಲ್ಲ.

Proverbs 21:12Proverbs 21Proverbs 21:14

Proverbs 21:13 in Other Translations

King James Version (KJV)
Whoso stoppeth his ears at the cry of the poor, he also shall cry himself, but shall not be heard.

American Standard Version (ASV)
Whoso stoppeth his ears at the cry of the poor, He also shall cry, but shall not be heard.

Bible in Basic English (BBE)
He whose ears are stopped at the cry of the poor, will himself get no answer to his cry for help.

Darby English Bible (DBY)
Whoso stoppeth his ears at the cry of the poor, he also himself shall cry, and shall not be heard.

World English Bible (WEB)
Whoever stops his ears at the cry of the poor, He will also cry out, but shall not be heard.

Young's Literal Translation (YLT)
Whoso is shutting his ear from the cry of the poor, He also doth cry, and is not answered.

Whoso
stoppeth
אֹטֵ֣םʾōṭēmoh-TAME
his
ears
אָ֭זְנוֹʾāzĕnôAH-zeh-noh
cry
the
at
מִזַּעֲקַתmizzaʿăqatmee-za-uh-KAHT
of
the
poor,
דָּ֑לdāldahl
also
he
גַּֽםgamɡahm
shall
cry
ה֥וּאhûʾhoo
himself,
יִ֝קְרָ֗אyiqrāʾYEEK-RA
but
shall
not
וְלֹ֣אwĕlōʾveh-LOH
be
heard.
יֵעָנֶֽה׃yēʿāneyay-ah-NEH

Cross Reference

ಯಾಕೋಬನು 2:13
ಕರುಣೆ ತೋರಿಸದೆ ಇರುವವನಿಗೆ ನ್ಯಾಯತೀರ್ಪಿನಲ್ಲಿ ಕರುಣೆಯು ತೋರಿಸಲ್ಪಡುವದಿಲ್ಲ. ಕರುಣೆಯು ನ್ಯಾಯತೀರ್ಪಿಗಿಂತ ಮೇಲಾಗಿ ಹಿಗ್ಗುತ್ತದೆ.

ಅಪೊಸ್ತಲರ ಕೃತ್ಯಗ 7:57
ಆದರೆ ಅವರು ಮಹಾಶಬ್ದದಿಂದ ಕೂಗಿ ತಮ್ಮ ಕಿವಿಗಳನ್ನು ಮುಚ್ಚಿಕೊಂಡು ಒಮ್ಮನಸ್ಸಿನಿಂದ ಅವನ ಮೇಲೆ ಬಿದ್ದು

ಮತ್ತಾಯನು 18:30
ಅವನು ಅದಕ್ಕೆ ಒಪ್ಪದೆ ಹೊರಟುಹೋಗಿ ತನ್ನ ಸಾಲವನ್ನು ತೀರಿಸುವ ವರೆಗೆ ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು.

ಮತ್ತಾಯನು 7:2
ನೀವು ಮಾಡುವ ತೀರ್ಪಿ ನಿಂದಲೇ ನಿಮಗೆ ತೀರ್ಪಾಗುವದು; ಮತ್ತು ನೀವು ಅಳೆಯುವ ಅಳತೆಯಿಂದಲೇ ನಿಮಗೆ ತಿರಿಗಿ ಅಳತೆ ಯಾಗುವದು.

ಮತ್ತಾಯನು 6:14
ಆದದರಿಂದ ನೀವು ಮನುಷ್ಯರ ಅಪರಾಧ ಗಳನ್ನು ಕ್ಷಮಿಸುವದಾದರೆ ಪರಲೋಕದ ನಿಮ್ಮ ತಂದೆಯು ಸಹ ನಿಮ್ಮನ್ನು ಕ್ಷಮಿಸುವನು.

ಜೆಕರ್ಯ 7:9
ನಿಜವಾದ ನ್ಯಾಯವನ್ನು ತೀರಿಸಿರಿ; ಒಬ್ಬರಿಗೊಬ್ಬರು ಕೃಪೆಯನ್ನೂ ಕನಿಕರವನ್ನೂ ತೋರಿಸಿರಿ;

ಯೆರೆಮಿಯ 34:16
ಆದರೆ ತಿರುಗಿಕೊಂಡು ನನ್ನ ಹೆಸರನ್ನು ಅಪವಿತ್ರ ಮಾಡಿ ನೀವು ಅವರ ಮನಸ್ಸು ಬಂದ ಹಾಗೆ ಬಿಡುಗಡೆಯಾಗಿ ಕಳುಹಿಸಿದ್ದ ನಿಮ್ಮ ನಿಮ್ಮ ದಾಸದಾಸಿ ಯರನ್ನು ಒಬ್ಬೊಬ್ಬನು ತಿರಿಗಿ ಬರಮಾಡಿ ನಿಮಗೆ ದಾಸದಾಸಿಯರಾಗುವ ಹಾಗೆ ವಶಮಾಡಿಕೊಂಡಿ ದ್ದೀರಿ.

ಯೆಶಾಯ 58:6
ನಾನು ಆದುಕೊಳ್ಳುವ ಉಪವಾಸವು ಕೇಡಿನ ಬಂಧನಗಳನ್ನು ಬಿಚ್ಚುವದೂ ಭಾರವಾದ ಹೊರೆಯನ್ನು ಬಿಚ್ಚುವದೂ ಹಿಂಸಿಸಲ್ಪಟ್ಟವರು ಬಿಡಿಸ ಲ್ಪಟ್ಟವರಾಗಿ ಹಾಕುವದೂ ಆಗಿದೆಯಲ್ಲವೋ?

ಯೆಶಾಯ 1:15
ನೀವು ನಿಮ್ಮ ಕೈಗಳನ್ನು ಚಾಚಲು ನಾನು ನನ್ನ ಕಣ್ಣುಗಳನ್ನು ನಿಮಗೆ ಮರೆಮಾಡುವೆನು; ಹೌದು, ನೀವು ಬಹು ಪ್ರಾರ್ಥನೆಗಳನ್ನು ಮಾಡಿ ದರೂ ನಾನು ಕೇಳೆನು, ನಿಮ್ಮ ಕೈಗಳು ರಕ್ತದಿಂದ ತುಂಬಿಯವೆ.

ಙ್ಞಾನೋಕ್ತಿಗಳು 28:27
ಬಡವರಿಗೆ ದಾನಮಾಡು ವವರು ಕೊರತೆಪಡುವದಿಲ್ಲ; ತನ್ನ ಕಣ್ಣುಗಳನ್ನು ಮುಚ್ಚಿ ಕೊಳ್ಳುವವನಿಗೆ ಅನೇಕ ಶಾಪಗಳು.

ಙ್ಞಾನೋಕ್ತಿಗಳು 1:28
ಅವರು ನನಗೆ ಮೊರೆಯಿಡುವರು, ಆದರೆ ನಾನು ಅವರಿಗೆ ಉತ್ತರಕೊಡೆನು. ಅವರು ಆತುರದಿಂದ ನನ್ನನ್ನು ಹುಡು ಕಿದರೂ ಕಂಡುಕೊಳ್ಳುವದಿಲ್ಲ.

ಕೀರ್ತನೆಗಳು 58:4
ಹಾವಿನ ವಿಷದ ಹಾಗೆ ಅವರ ವಿಷವುಂಟು; ಅವರು ಕಿವಿಯನ್ನು ಮುಚ್ಚಿಕೊಳ್ಳುವ ಕಿವುಡ ಸರ್ಪದ ಹಾಗಿ ದ್ದಾರೆ.

ಕೀರ್ತನೆಗಳು 18:41
ಅವರು ಮೊರೆಯಿಟ್ಟರು, ಆದರೆ ರಕ್ಷಿಸುವವರು ಯಾರೂ ಇದ್ದಿಲ್ಲ. ಕರ್ತನಿಗೂ ಮೊರೆ ಇಟ್ಟರು, ಆದರೆ ಅವರಿಗೆ ಆತನು ಉತ್ತರ ಕೊಡ ಲಿಲ್ಲ.

ನೆಹೆಮಿಯ 5:13
ನಾನು ನನ್ನ ಬಟ್ಟೆಯನ್ನು ಝಾಡಿಸಿ -- ಈ ಮಾತಿನ ಪ್ರಕಾರ ಮಾಡದೆ ಇರುವ ಪ್ರತಿ ಮನುಷ್ಯನನ್ನು ದೇವರು ಅವನ ಮನೆಯಿಂದಲೂ ಅವನ ಕಷ್ಟಾರ್ಜಿತದಿಂದಲೂ ಝಾಡಿಸಲಿ. ಅವನು ಇದೇ ಪ್ರಕಾರ ಝಾಡಿಸಲ್ಪಟ್ಟು ಬರಿದಾಗಲಿ ಅಂದೆನು. ಅದಕ್ಕೆ ಸಭೆಯವರೆಲ್ಲರೂ--ಆಮೆನ್‌ ಎಂದು ಹೇಳಿ ಕರ್ತನನ್ನು ಸ್ತುತಿಸಿದರು. ನನ್ನ ದೇವರೇ, ಜನರು ಈ ಮಾತಿನ ಪ್ರಕಾರ ಮಾಡಿದರು.

ನೆಹೆಮಿಯ 5:1
ಆದರೆ ಜನರಿಂದಲೂ ಅವರ ಹೆಂಡತಿಯರಿಂದಲೂ ತಮ್ಮ ಸಹೋದರರಾದ ಯೆಹೂದ್ಯರ ಮೇಲೆ ದೊಡ್ಡ ಕೂಗು ಉಂಟಾಯಿತು.

ಧರ್ಮೋಪದೇಶಕಾಂಡ 15:7
ನಿನ್ನ ದೇವರಾದ ಕರ್ತನು ನಿನಗೆ ಕೊಡುವ ನಿನ್ನ ದೇಶದಲ್ಲಿ ನಿನ್ನ ಬಾಗಲುಗಳ ಒಂದರಲ್ಲಿ ನಿನ್ನ ಸಹೋದರರಲ್ಲಿ ಒಬ್ಬನಾಗಿರುವ ಬಡವನು ನಿನ್ನಲ್ಲಿದ್ದರೆ ನಿನ್ನ ಹೃದಯವನ್ನು ಕಠಿಣಮಾಡಿಕೊಳ್ಳಬೇಡ. ನಿನ್ನ ಕೈಯನ್ನು ನಿನ್ನ ಬಡ ಸಹೋದರನಿಗೆ ಮುಚ್ಚಿಕೊಳ್ಳ ಬೇಡ.

ಲೂಕನು 13:25
ಮನೇಯಜಮಾನನು ಒಂದು ಸಾರಿ ಎದ್ದು ಬಾಗಲನ್ನು ಮುಚ್ಚಿಕೊಂಡರೆ ನೀವು ಹೊರಗೆ ನಿಂತು ಕೊಂಡು ಬಾಗಲನ್ನು ತಟ್ಟುತ್ತಾ--ಕರ್ತನೇ, ಕರ್ತನೇ, ನಮಗಾಗಿ ತೆರೆ ಎಂದು ಹೇಳುವದಕ್ಕೆ ಆರಂಭಿಸಿದಾಗ ಆತನು ನಿಮಗೆ ಪ್ರತ್ಯುತ್ತರವಾಗಿ--ನೀವು ಎಲ್ಲಿಯ ವರೋ ನಾನರಿಯೆ ಎಂದು ಹೇಳುವನು.

ಮತ್ತಾಯನು 25:41
ಆತನು ಎಡಗಡೆ ಯಲ್ಲಿರುವವರಿಗೆ--ಶಾಪಗ್ರಸ್ತರೇ, ನೀವು ನನ್ನಿಂದ ತೊಲಗಿ ಸೈತಾನನಿಗೂ ಅವನ ದೂತರಿಗೂ ಸಿದ್ಧ ಮಾಡಲ್ಪಟ್ಟ ನಿತ್ಯ ಬೆಂಕಿಯೊಳಗೆ ಹೋಗಿರಿ.