Jeremiah 3:22
ಹಿಂಜರಿದ ಮಕ್ಕಳೇ, ನೀವು ತಿರುಗಿಕೊಳ್ಳಿರಿ; ನಿಮ್ಮ ಹಿಂಜರಿಯುವಿಕೆಯನ್ನು ನಾನು ಸ್ವಸ್ಥಮಾಡುವೆನು ಎಂದು ಕರ್ತನು ಅನ್ನುತ್ತಾನೆ. ಇಗೋ, ನಿನ್ನ ಬಳಿಗೆ ಬರುತ್ತೇವೆ; ನೀನು ದೇವರಾದ ನಮ್ಮ ಕರ್ತನಾಗಿದ್ದೀ.
Jeremiah 3:22 in Other Translations
King James Version (KJV)
Return, ye backsliding children, and I will heal your backslidings. Behold, we come unto thee; for thou art the LORD our God.
American Standard Version (ASV)
Return, ye backsliding children, I will heal your backslidings. Behold, we are come unto thee; for thou art Jehovah our God.
Bible in Basic English (BBE)
Come back, you children who have been turned away, and I will take away your desire for wandering. See, we have come to you, for you are the Lord our God.
Darby English Bible (DBY)
-- Return, backsliding children; I will heal your backslidings. ... Behold, we come unto thee; for thou art Jehovah our God.
World English Bible (WEB)
Return, you backsliding children, I will heal your backsliding. Behold, we are come to you; for you are Yahweh our God.
Young's Literal Translation (YLT)
Turn back, O backsliding sons, I cause your backslidings to cease. -- Behold us, we have come to Thee, For Thou `art' Jehovah our God.
| Return, | שׁ֚וּבוּ | šûbû | SHOO-voo |
| ye backsliding | בָּנִ֣ים | bānîm | ba-NEEM |
| children, | שׁוֹבָבִ֔ים | šôbābîm | shoh-va-VEEM |
| heal will I and | אֶרְפָּ֖ה | ʾerpâ | er-PA |
| your backslidings. | מְשׁוּבֹֽתֵיכֶ֑ם | mĕšûbōtêkem | meh-shoo-voh-tay-HEM |
| Behold, | הִנְנוּ֙ | hinnû | heen-NOO |
| come we | אָתָ֣נוּ | ʾātānû | ah-TA-noo |
| unto thee; for | לָ֔ךְ | lāk | lahk |
| thou | כִּ֥י | kî | kee |
| Lord the art | אַתָּ֖ה | ʾattâ | ah-TA |
| our God. | יְהוָֹ֥ה | yĕhôâ | yeh-hoh-AH |
| אֱלֹהֵֽינוּ׃ | ʾĕlōhênû | ay-loh-HAY-noo |
Cross Reference
ಹೋಶೇ 14:4
ನಾನು ಅವರ ಹಿಂಜರಿಯುವಿಕೆಯನ್ನು ಸ್ವಸ್ಥ ಮಾಡುವೆನು. ನಾನು ಅವರನ್ನು ಮನಃಪೂರ್ವಕವಾಗಿ ಪ್ರೀತಿಸುವೆನು. ಯಾಕಂದರೆ ನನ್ನ ಕೋಪವು ಅವನ ಕಡೆಯಿಂದ ತಿರುಗಿಕೊಂಡಿದೆ.
ಜೆಕರ್ಯ 13:9
ಮೂರನೇ ಪಾಲನ್ನು ನಾನು ಬೆಂಕಿಯಲ್ಲಿ ಹಾಕಿ ಬೆಳ್ಳಿಯನ್ನು ಶುದ್ಧಮಾಡುವಂತೆ ಶುದ್ಧಮಾಡುವೆನು; ಬಂಗಾರವು ಶೋಧಿಸಲ್ಪಡುವ ಪ್ರಕಾರ ಅವರನ್ನು ಶೋಧಿಸುವೆನು; ಅವರು ನನ್ನ ಹೆಸರನ್ನು ಕರೆಯುವರು; ನಾನು ಅವರಿಗೆ ಉತ್ತರ ಕೊಡುವೆನು; ನಾನು--ಇದು ನನ್ನ ಜನವೆಂದು ಹೇಳುವೆನು; ಕರ್ತನು ನನ್ನ ದೇವರೆಂದು ಅವರು ಹೇಳುವರು ಎಂದು ಹೇಳುತ್ತಾನೆ.
ಹೋಶೇ 14:8
ಎಫ್ರಾಯಾಮೇ--ನಾನು ವಿಗ್ರಹಗಳೊಂದಿಗೆ ಇನ್ನು ಏನು ಮಾಡಬೇಕಾಗಿದೆ? ನಾನು ಅವನನ್ನು ಕೇಳಿದ್ದೇನೆ ಮತ್ತು ನಾನು ಅವನನ್ನು ದೃಷ್ಟಿಸಿದ್ದೇನೆ. ನಾನು ಹಸುರಾಗಿ ಬೆಳೆದಿರುವ ತುರಾಯಿ ಮರದಂತಿದ್ದೇನೆ. ನಿನ್ನ ಫಲವು ನನ್ನಿಂದ ಕಂಡುಕೊಂಡಿ ಎಂದು ಅಂದುಕೊಳ್ಳುವದು.
ಹೋಶೇ 14:1
ಓ ಇಸ್ರಾಯೇಲೇ, ನಿನ್ನ ದೇವರಾದ ಕರ್ತನ ಕಡೆಗೆ ತಿರುಗಿಕೊ, ಯಾಕಂದರೆ ನೀನು ನಿನ್ನ ದುಷ್ಕೃತ್ಯದಿಂದ ಬಿದ್ದಿದ್ದೀ;
ಹೋಶೇ 13:4
ಆದಾಗ್ಯೂ ನಾನು ಐಗುಪ್ತದಿಂದ ನಿನ್ನ ದೇವರಾಗಿರುವ ಕರ್ತನಾಗಿದ್ದೇನೆ, ನೀನು ನನ್ನ ಹೊರತು ಯಾವ ದೇವರನ್ನೂ ತಿಳಿದುಕೊಳ್ಳಬಾರದು; ಯಾಕಂದರೆ ನನ್ನ ಹೊರತು ನಿನಗೆ ಬೇರೆ ರಕ್ಷಕನು ಇಲ್ಲ.
ಹೋಶೇ 6:1
ಬನ್ನಿರಿ ನಾವು ಕರ್ತನ ಕಡೆಗೆ ತಿರುಗಿ ಕೊಳ್ಳೋಣ ಯಾಕಂದರೆ ಆತನು ಸೀಳಿ ಬಿಟ್ಟಿದ್ದಾನೆ, ನಮ್ಮನ್ನು ಸ್ವಸ್ಥ ಮಾಡುತ್ತಾನೆ; ಆತನು ಹೊಡೆದಿದ್ದಾನೆ; ಆತನು ನಮ್ಮನ್ನು ಕಟ್ಟುತ್ತಾನೆ.
ಹೋಶೇ 3:5
ಆಮೇಲೆ ಇಸ್ರಾಯೇಲಿನ ಮಕ್ಕಳು ತಿರುಗಿಕೊಂಡು ಅವರ ದೇವ ರಾದ ಕರ್ತನನ್ನು ಮತ್ತು ಅವರ ಅರಸನಾದ ದಾವೀದ ನನ್ನು ಹುಡುಕಿಕೊಂಡು ಅಂತ್ಯ ದಿವಸಗಳಲ್ಲಿ ಕರ್ತನನ್ನೂ ಆತನ ದಯೆಯನ್ನೂ ಭಯದಿಂದ ಮರೆಹೋಗುವರು.
ಯೆರೆಮಿಯ 33:6
ಇಗೋ, ನಾನು ಅದಕ್ಕೆ ಕ್ಷೇಮವನ್ನೂ ಸ್ವಸ್ಥತೆಯನ್ನೂ ಹುಟ್ಟಿಸಿ ಅವರನ್ನು ಗುಣಮಾಡಿ ಸಮಾಧಾನದ ಸತ್ಯವನ್ನು ಸಮೃದ್ಧಿಯಾಗಿ ಅವರಿಗೆ ಪ್ರಕಟಮಾಡುವೆನು.
ಯೆರೆಮಿಯ 31:18
ಎಫ್ರಾಯಾಮನು ಅಂಗಲಾಚುವದನ್ನು ನಿಶ್ಚಯ ವಾಗಿ ಕೇಳಿದೆನು; ಹೇಗಂದರೆ--ನೀನು ನನ್ನನ್ನು ಶಿಕ್ಷಿ ಸಿದಿ; ತಿದ್ದುಪಾಟಾಗದ ಎತ್ತಿಗೆ ಆದ ಹಾಗೆ ನನಗೆ ಶಿಕ್ಷೆ ಆಯಿತು; ನನ್ನನ್ನು ತಿರುಗಿಸು, ಆಗ ತಿರುಗಿ ಕೊಳ್ಳುವೆನು; ಓ ಕರ್ತನೇ, ನೀನೇ ನನ್ನ ದೇವ ರಾಗಿದ್ದೀ.
ಯೆರೆಮಿಯ 30:17
ಚೀಯೋನು ತಳ್ಳಿಬಿಡಲ್ಪ ಟ್ಟದ್ದೂ ಅದನ್ನು ವಿಚಾರಿಸುವವರು ಯಾರೂ ಇಲ್ಲ ವೆಂದೂ ಅವರು ನಿನ್ನ ವಿಷಯ ಹೇಳುವದರಿಂದ ನಿನಗೆ ಕ್ಷೇಮವನ್ನುಂಟು ಮಾಡುವೆನು; ನಿನ್ನ ಗಾಯ ಗಳನ್ನು ಸ್ವಸ್ಥ ಮಾಡುವೆನೆಂದು ಕರ್ತನು ಅನ್ನುತ್ತಾನೆ.
ಯೆಶಾಯ 27:8
ಮಿತಿಯಾಗಿ ಕಳುಹಿಸಿ ಬಿಡುವದರ ಮೂಲಕ ಅದರೊಡನೆ ವಿವಾದ ಮಾಡಿದಿ. ಮೂಡಣ ಗಾಳಿಯು ಬೀಸುವ ದಿನದಲ್ಲಿ ತನ್ನ ಬಲವಾದ ವಾಯು ವಿನಿಂದ ಆತನು ಅದನ್ನು ತೊಲಗಿಸಿದನು.
ಪರಮ ಗೀತ 1:4
ನನ್ನನ್ನು ಎಳಕೋ, ನಾವು ನಿನ್ನ ಹಿಂದೆ ಓಡುವೆವು; ಅರಸನು ನನ್ನನ್ನು ತನ್ನ ಕೊಠಡಿಗಳಿಗೆ ಕರಕೊಂಡು ಬಂದಿದ್ದಾನೆ. ನಾವು ನಿನ್ನಲ್ಲಿ ಉಲ್ಲಾಸಪಟ್ಟು ಸಂತೋಷಪಡುತ್ತೇವೆ; ದ್ರಾಕ್ಷಾರಸ ಕ್ಕಿಂತ ನಿನ್ನ ಪ್ರೀತಿಯನ್ನು ಜ್ಞಾಪಕಮಾಡುತ್ತೇವೆ; ಯಥಾ ರ್ಥರು ನಿನ್ನನ್ನು ಪ್ರೀತಿಮಾಡುತ್ತಾರೆ.