Jeremiah 48:2
ಮೋವಾಬಿನ ಕೀರ್ತಿ ಇನ್ನು ಮೇಲೆ ಇರುವದೇ ಇಲ್ಲ; ಹೆಷ್ಬೋನಿನಲ್ಲಿ ಅದಕ್ಕೆ ವಿರೋಧವಾಗಿ ಕೇಡನ್ನು ಆಲೋಚಿಸಿದ್ದಾರೆ; ಬನ್ನಿ, ಜನಾಂಗವಿಲ್ಲದ ಹಾಗೆ ಅದನ್ನು ಕಡಿದುಬಿಡೋಣ, ಮದ್ಮೆನೇ, ನೀನು ಸಹ ಕಡಿಯಲ್ಪಡುವಿ; ಕತ್ತಿಯು ನಿನ್ನನ್ನು ಹಿಂದಟ್ಟುವದು.
Jeremiah 48:2 in Other Translations
King James Version (KJV)
There shall be no more praise of Moab: in Heshbon they have devised evil against it; come, and let us cut it off from being a nation. Also thou shalt be cut down, O Madmen; the sword shall pursue thee.
American Standard Version (ASV)
The praise of Moab is no more; in Heshbon they have devised evil against her: Come, and let us cut her off from being a nation. Thou also, O Madmen, shalt be brought to silence: the sword shall pursue thee.
Bible in Basic English (BBE)
The praise of Moab has come to an end; as for Heshbon, evil has been designed against her; come, let us put an end to her as a nation. But your mouth will be shut, O Madmen; the sword will go after you.
Darby English Bible (DBY)
Moab's praise is no more; in Heshbon they have devised evil against her: Come, and let us cut her off from [being] a nation. Thou also, O Madmen, shalt be cut down; the sword shall pursue thee.
World English Bible (WEB)
The praise of Moab is no more; in Heshbon they have devised evil against her: Come, and let us cut her off from being a nation. You also, Madmen, shall be brought to silence: the sword shall pursue you.
Young's Literal Translation (YLT)
There is no more praise of Moab, In Heshbon they devised against it evil: Come, and we cut it off from `being' a nation, Also, O Madmen, thou art cut off, After thee goeth a sword.
| There shall be no | אֵ֣ין | ʾên | ane |
| more | עוֹד֮ | ʿôd | ode |
| praise | תְּהִלַּ֣ת | tĕhillat | teh-hee-LAHT |
| of Moab: | מוֹאָב֒ | môʾāb | moh-AV |
| in Heshbon | בְּחֶשְׁבּ֗וֹן | bĕḥešbôn | beh-hesh-BONE |
| devised have they | חָשְׁב֤וּ | ḥošbû | hohsh-VOO |
| evil | עָלֶ֙יהָ֙ | ʿālêhā | ah-LAY-HA |
| against | רָעָ֔ה | rāʿâ | ra-AH |
| it; come, | לְכ֖וּ | lĕkû | leh-HOO |
| off it cut us let and | וְנַכְרִיתֶ֣נָּה | wĕnakrîtennâ | veh-nahk-ree-TEH-na |
| nation. a being from | מִגּ֑וֹי | miggôy | MEE-ɡoy |
| Also | גַּם | gam | ɡahm |
| down, cut be shalt thou | מַדְמֵ֣ן | madmēn | mahd-MANE |
| O Madmen; | תִּדֹּ֔מִּי | tiddōmmî | tee-DOH-mee |
| the sword | אַחֲרַ֖יִךְ | ʾaḥărayik | ah-huh-RA-yeek |
| shall pursue | תֵּ֥לֶךְ | tēlek | TAY-lek |
| thee. | חָֽרֶב׃ | ḥāreb | HA-rev |
Cross Reference
ಯೆರೆಮಿಯ 31:36
ಈ ನಿಯಮಗಳು ನನ್ನ ಸನ್ನಿಧಿ ಯಿಂದ ಯಾವಾಗ ಇಲ್ಲದೆ ಹೋಗುವವೋ ಆಗ ಇಸ್ರಾಯೇಲಿನ ಸಂತಾನವು ಸಹ ಸದಾಕಾಲ ನನ್ನ ಮುಂದೆ ಜನಾಂಗವಾಗಿರದ ಹಾಗೆ ನಿಂತು ಹೋಗುವ ದೆಂದು ಕರ್ತನು ಅನ್ನುತ್ತಾನೆ.
ಯೆಶಾಯ 16:14
ಆದರೆ ಕರ್ತನು ಮಾತನಾಡಿ--ಮೂರು ವರುಷ ಗಳಲ್ಲಿ ಕೂಲಿಯಾಳಿನ ವರುಷಗಳಂತೆ ಮೋವಾಬಿನ ಮಹಿಮೆಯು ಆ ಎಲ್ಲಾ ದೊಡ್ಡ ಸಮೂಹದೊಂದಿಗೆ ತಿರಸ್ಕರಿಸಲ್ಪಡುವ ಹಾಗೆ ಉಳಿದವರು ಚಿಕ್ಕ ಗುಂಪಾಗಿ ಬಲಹೀನರಾಗುವರು ಎಂದು ಹೇಳಿದ್ದಾನೆ.
ಅರಣ್ಯಕಾಂಡ 32:37
ರೂಬೇನನ ಮಕ್ಕಳು ಹೆಷ್ಬೋನ್, ಎಲೀಯಾಲೆ, ಕಿರ್ಯಾತಯಿಮ್,
ಯೆರೆಮಿಯ 49:3
ಹೆಷ್ಬೋನೇ, ಗೋಳಾಡು; ಆಯಿ ಹಾಳಾಯಿತು; ರಬ್ಬಾದ ಕುಮಾರ್ತೆಯರೇ ಕೂಗಿರಿ; ಗೋಣಿತಟ್ಟನ್ನು ಕಟ್ಟಿಕೊಳ್ಳಿರಿ; ಪ್ರಲಾಪಿಸಿರಿ, ಬೇಲಿಗಳ ಬಳಿಯಲ್ಲಿ ಅತ್ತಿತ್ತ ಓಡಾಡಿರಿ; ಅವರ ಅರಸನೂ ಅವನ ಯಾಜಕರೂ ಅವನ ಪ್ರಧಾನರೂ ಒಟ್ಟಾಗಿ ಸೆರೆಗೆ ಹೋಗುವರು.
ಯೆರೆಮಿಯ 48:45
ಓಡಿ ಹೋದವರು ಹೆಷ್ಬೋನಿನ ನೆರಳಿನಲ್ಲಿ ಅದರ ಶಕ್ತಿಯ ನಿಮಿತ್ತ ನಿಂತುಕೊಂಡರು; ಆದರೆ ಹೆಷ್ಬೋನಿನೊಳಗಿಂದ ಬೆಂಕಿಯೂ ಸೀಹೋನಿನ ಮಧ್ಯದಿಂದ ಜ್ವಾಲೆಯೂ ಹೊರಟು ಮೋವಾಬಿನ ಮೂಲೆಯನ್ನೂ ಗದ್ದಲದ ಮಕ್ಕಳ ನಡುನೆತ್ತಿಯನ್ನೂ ದಹಿಸಿಬಿಡುವದು.
ಯೆರೆಮಿಯ 48:42
ಮೋವಾಬು ಕರ್ತನಿಗೆ ವಿರೋಧವಾಗಿ ತನ್ನನ್ನು ಹೆಚ್ಚಿಸಿಕೊಂಡದ್ದರಿಂದ ಜನಾಂಗವಲ್ಲದ ಹಾಗೆ ನಾಶವಾಗುವದು.
ಯೆರೆಮಿಯ 48:34
ಹೆಷ್ಬೋನಿನ ಕೂಗಿನ ನಿಮಿತ್ತ ಎಲೆಯಾಳೆಯ ವರೆಗೂ ಯಹಚಿನ ವರೆಗೂ ಚೋಯರ್ ಮೊದಲ್ಗೊಂಡು ಹೊರೊನಯಿಮಿನ ವರೆಗೂ ಮೂರು ವರುಷದ ಕಡಸಿನಂತೆ ತಮ್ಮ ಶಬ್ದ ವನ್ನೆತ್ತಿದ್ದರು; ಯಾಕಂದರೆ ನಿವಿಾ್ರೇಮ್‌ನ ನೀರುಗಳು ಸಹ ಹಾಳಾದವು.
ಯೆರೆಮಿಯ 48:17
ಅದರ ಸುತ್ತಲಿರುವವರೆಲ್ಲರೇ, ಅದಕ್ಕೆ ಗೋಳಾಡಿರಿ; ಅದರ ಹೆಸರನ್ನು ಬಲ್ಲವರೆಲ್ಲರೇ-- ಬಲವಾದ ಕೋಲೂ ಸೌಂದರ್ಯವಾದ ಬೆತ್ತವೂ ಹೇಗೆ ಮುರಿದು ಹೋಯಿತು! ಎಂದು ಹೇಳಿರಿ.
ಯೆರೆಮಿಯ 46:28
ನನ್ನ ಸೇವಕನಾದ ಯಾಕೋಬನೇ, ನೀನು ಭಯಪಡ ಬೇಡವೆಂದು ಕರ್ತನು ಅನ್ನುತ್ತಾನೆ; ನಾನೇ ನಿನ್ನ ಸಂಗಡ ಇದ್ದೇನೆ; ನಾನು ನಿನ್ನನ್ನು ಎಲ್ಲಿಗೆ ಓಡಿಸಿ ದೆನೋ ಆ ಜನಾಂಗಗಳನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡು ತ್ತೇನೆ; ಆದರೆ ನಿನ್ನನ್ನು ನಾಶಮಾಡುವದಿಲ್ಲ; ನ್ಯಾಯದಿಂದಲೇ ನಿನ್ನನ್ನು ಶಿಕ್ಷಿಸುತ್ತೇನೆ; ಆದಾಗ್ಯೂ ನಿನ್ನನ್ನು ಶಿಕ್ಷಿಸದೇ ಬಿಡುವದಿಲ್ಲ.
ಯೆರೆಮಿಯ 33:24
ಈ ಜನರು ಮಾತನಾಡುವದನ್ನು ನೀನು ನೋಡಲಿಲ್ಲವೊ? ಕರ್ತನು ಆದುಕೊಂಡ ಎರಡು ಗೋತ್ರಗಳನ್ನು ಬೇಡವೆಂದಿದ್ದಾನೆಂದು ಹೇಳಿ ನನ್ನ ಜನರನ್ನು ಇನ್ನು ಅವರ ಮುಂದೆ ಜನಾಂಗವಲ್ಲದ ಹಾಗೆ ಅಸಡ್ಡೆ ಮಾಡಿದ್ದಾರೆ.
ಯೆರೆಮಿಯ 25:17
ಆಗ ನಾನು ಪಾತ್ರೆಯನ್ನು ಕರ್ತನ ಕೈಯಿಂದ ತಕ್ಕೊಂಡು ಕರ್ತನು ನನ್ನನ್ನು ಕಳುಹಿಸಿದ ಎಲ್ಲಾ ಜನಾಂಗಗಳಿಗೆ ಕುಡಿಸಿದೆನು.
ಯೆರೆಮಿಯ 25:15
ಇಸ್ರಾಯೇಲಿನ ದೇವರಾದ ಕರ್ತನು ನನಗೆ ಹೀಗೆ ಹೇಳುತ್ತಾನೆ--ಈ ರೌದ್ರದ ದ್ರಾಕ್ಷಾರಸ ಪಾತ್ರೆ ಯನ್ನು, ನಾನು ನಿನ್ನನ್ನು ಕಳುಹಿಸುವ ಎಲ್ಲಾ ಜನಾಂಗಗಳು ಅದನ್ನು ಕುಡಿಯುವಂತೆ ನನ್ನ ಕೈಯಿಂದ ತಕ್ಕೋ.
ಯೆಶಾಯ 25:10
ಈ ಪರ್ವತದಲ್ಲಿ ಕರ್ತನ ಕೈ ವಿಶ್ರ ಮಿಸಿಕೊಳ್ಳುವದು; (ನೆಲೆಯಾಗಿರುವದು) ಒಣ ಹುಲ್ಲ ನ್ನು ತಿಪ್ಪೆಗುಂಡಿಯಲ್ಲಿ ತುಳಿಯುವಂತೆ ಮೋವಾಬು ಆತನ ಕೆಳಗೆ ತುಳಿಯಲ್ಪಡುವದು.
ಯೆಶಾಯ 16:8
ಹೆಷ್ಬೋನಿನ ಹೊಲ ಗಳೂ, ಸಿಬ್ಮದ ದ್ರಾಕ್ಷೆಯೂ ನಿಸ್ಸಾರವಾಗಿವೆ; ಅನ್ಯ ಜನಗಳ ಪ್ರಭುಗಳು ಅದರ ಮುಖ್ಯವಾದ ಗಿಡಗಳನ್ನು ಮುರಿದುಹಾಕಿದ್ದಾರೆ; ಅವರು ಯಜ್ಜೇರಿನ ವರೆಗೂ ಬಂದರು; ಅಡವಿಯಲ್ಲಿ ಅವರು ಸಂಚರಿಸಿದರು. ಅವಳ ಕೊಂಬೆಗಳು ಚಾಚಲ್ಪಟ್ಟವು ಅವರು ಸಮುದ್ರದ ಮೇಲೆ ಹೋದರು.
ಯೆಶಾಯ 15:5
ನನ್ನ ಹೃದಯವು ಮೋವಾಬಿನ ನಿಮಿತ್ತ ಕೂಗು ತ್ತದೆ; ಅಲ್ಲಿಂದ ಪಲಾಯನವಾದವರು ಮೂರು ವರುಷದ ಕಡಸಿನಂತೆ ಚೋಯರಿಗೆ ಓಡಿಹೋಗು ವರು; ಲೂಹೀಥ್ ದಿಣ್ಣೆಯನ್ನು ಅಳುತ್ತಾ ಹತ್ತುತ್ತಾರೆ; ಯಾಕಂ ದರೆ ಹೊರೊನಯಿಮಿನ ದಾರಿಯಲ್ಲಿ ನಡೆಯುತ್ತಾ ನಾಶವಾದೆವಲ್ಲಾ ಎಂದು ಸ್ವರಗೈಯು ತ್ತಾರೆ.
ಯೆಶಾಯ 15:1
ಮೋವಾಬಿನ ವಿಷಯವಾದ ದೈವೋಕ್ತಿ. ಆ ರಾತ್ರಿಯಲ್ಲಿ ಮೋವಾಬಿನ ಆರ್ ಹಾಳಾಗಿ ನಿಶ್ಯಬ್ದವಾಯಿತು; ಆ ರಾತ್ರಿಯಲ್ಲಿ ಮೋವಾ ಬಿನ ಕಿರ್ ಹಾಳಾಗಿ ನಿಶ್ಯಬ್ಧವಾಯಿತು
ಕೀರ್ತನೆಗಳು 83:4
ಅವರು--ಬನ್ನಿರಿ, ಅವ ರನ್ನು ಜನಾಂಗವಾಗಿರದ ಹಾಗೆ ನಾವು ಅವರನ್ನು ನಿರ್ಮೂಲ ಮಾಡೋಣ; ಇಸ್ರಾಯೇಲಿನ ಹೆಸರು ಇನ್ನು ಜ್ಞಾಪಕಕ್ಕೆ ಬಾರದಿರಲಿ ಅನ್ನುತ್ತಾರೆ.
ಎಸ್ತೇರಳು 3:8
ಆಗ ಹಾಮಾ ನನು ಅರಸನಾದ ಅಹಷ್ವೇರೋಷನಿಗೆ ಹೇಳಿ ದ್ದೇನಂದರೆ--ನಿನ್ನ ರಾಜ್ಯದ ಸಕಲ ಪ್ರಾಂತ್ಯಗಳಲ್ಲಿರುವ ಜನರೊಳಗೆ ಚದುರಿಸಲ್ಪಟ್ಟು ವ್ಯಾಪಿಸಿರುವ ಜನರಿ ದ್ದಾರೆ. ಅವರ ನ್ಯಾಯ ಪ್ರಮಾಣಗಳು ಸಕಲ ಜನರಿಗೆ ಪ್ರತಿಕೂಲವಾಗಿವೆ. ಅವರು ಅರಸನ ಆಜ್ಞೆಗಳನ್ನು ಕೈಕೊಳ್ಳುವದಿಲ್ಲ. ಆದಕಾರಣ ಅವರನ್ನು ಇರಗೊಡಿ ಸುವದು ಅರಸನ ಪ್ರಯೋಜನಕ್ಕೆ ತಕ್ಕದ್ದಲ್ಲ.
ಅರಣ್ಯಕಾಂಡ 21:25
ಇಸ್ರಾಯೇಲ್ಯರು ಆ ಪಟ್ಟಣಗಳನ್ನೆಲ್ಲಾ ತೆಗೆದು ಕೊಂಡರು; ಇಸ್ರಾಯೇಲ್ಯರು ಅಮೋರಿಯರ ಸಮಸ್ತ ಪಟ್ಟಣಗಳಲ್ಲಿಯೂ ಹೆಷ್ಬೋನಿನಲ್ಲಿಯೂ ಅದರ ಸಮಸ್ತ ಗ್ರಾಮಗಳಲ್ಲಿಯೂ ವಾಸಮಾಡಿದರು.