ಯೋಬನು 1:7
ಕರ್ತನು ಸೈತಾನನಿಗೆ--ನೀನು ಎಲ್ಲಿಂದ ಬಂದಿ ಅಂದನು. ಸೈತಾನನು ಕರ್ತನಿಗೆ ಪ್ರತ್ಯುತ್ತರವಾಗಿ--ಭೂಮಿಯಲ್ಲಿ ಅತ್ತಿಂದ ಇತ್ತ ಇತ್ತಿಂದ ಅತ್ತ ತಿರುಗಾಡಿ ಮೇಲೆಯೂ ಕೆಳಗೂ ಹೋಗುತ್ತಾ ಅದರಲ್ಲಿ ನಡೆದಾಡಿ ಬಂದೆನು ಅಂದನು.
And the Lord | וַיֹּ֧אמֶר | wayyōʾmer | va-YOH-mer |
said | יְהוָ֛ה | yĕhwâ | yeh-VA |
unto | אֶל | ʾel | el |
Satan, | הַשָּׂטָ֖ן | haśśāṭān | ha-sa-TAHN |
Whence | מֵאַ֣יִן | mēʾayin | may-AH-yeen |
comest | תָּבֹ֑א | tābōʾ | ta-VOH |
Satan Then thou? | וַיַּ֨עַן | wayyaʿan | va-YA-an |
answered | הַשָּׂטָ֤ן | haśśāṭān | ha-sa-TAHN |
אֶת | ʾet | et | |
the Lord, | יְהוָה֙ | yĕhwāh | yeh-VA |
said, and | וַיֹּאמַ֔ר | wayyōʾmar | va-yoh-MAHR |
From going to and fro | מִשּׁ֣וּט | miššûṭ | MEE-shoot |
earth, the in | בָּאָ֔רֶץ | bāʾāreṣ | ba-AH-rets |
and from walking up and down | וּמֵֽהִתְהַלֵּ֖ךְ | ûmēhithallēk | oo-may-heet-ha-LAKE |
in it. | בָּֽהּ׃ | bāh | ba |
Cross Reference
1 ಪೇತ್ರನು 5:8
ಸ್ವಸ್ಥಚಿತ್ತರಾಗಿರ್ರಿ. ಎಚ್ಚರವಾಗಿರ್ರಿ; ನಿಮ್ಮ ವಿರೋಧಿ ಯಾಗಿರುವ ಸೈತಾನನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.
ಯೋಬನು 2:2
ಆಗ ಕರ್ತನು ಸೈತಾನನಿಗೆ--ನೀನು ಎಲ್ಲಿಂದ ಬಂದೆ ಅಂದನು. ಸೈತಾನನು ಪ್ರತ್ಯುತ್ತರವಾಗಿ ಕರ್ತನಿಗೆಭೂಮಿಯಲ್ಲಿ ಅತ್ತಿಂದ ಇತ್ತ ಇತ್ತಿಂದ ಅತ್ತ, ಮೇಲೆಯೂ ಕೆಳಗೂ ಹೋಗುತ್ತಾ ಅದರಲ್ಲಿ ನಡೆ ದಾಡಿ ಬಂದೆನು ಅಂದನು.
2 ಅರಸುಗಳು 5:25
ಆಗ ಇವನು ಒಳಗೆ ಪ್ರವೇಶಿಸಿ ತನ್ನ ಯಜಮಾನನ ಮುಂದೆ ನಿಂತನು. ಎಲೀಷನು ಅವನಿಗೆ--ಗೇಹಜಿಯೇ, ಎಲ್ಲಿಂದ ಬಂದಿ ಅಂದನು. ಅದಕ್ಕವನು--ನಿನ್ನ ಸೇವಕನು ಎಲ್ಲಿಗೂ ಹೋಗಲಿಲ್ಲ ಅಂದನು.
ಜೆಕರ್ಯ 1:10
ಆಗ ಗಂಧದ ಗಿಡಗಳ ನಡುವೆ ನಿಂತ ಮನುಷ್ಯನು ಉತ್ತರಕೊಟ್ಟು ಹೇಳಿದ್ದೇನಂದರೆ--ಇವರು ಭೂಮಿ ಯಲ್ಲಿ ಅತ್ತಿಂದ ಇತ್ತ ಇತ್ತಿಂದ ಅತ್ತ ನಡೆದಾಡುವದಕ್ಕೆ ಕರ್ತನು ಕಳುಹಿಸಿದವರು ಅಂದನು.
ಜೆಕರ್ಯ 6:7
ಕಪಿಲ ವರ್ಣದವುಗಳು ಹೊರಟು ದೇಶದಲ್ಲಿ ಸಂಚಾರ ಮಾಡಹೋಗುವದಕ್ಕೆ ನೋಡಿದವು ಅಂದನು. ಆಗ ಅವನು--ಹೋಗಿ ದೇಶದಲ್ಲಿ ಅತ್ತಿತ್ತ ನಡೆದಾಡುವದಕ್ಕೆ ಇಲ್ಲಿಂದ ಹೋಗಿರಿ ಅಂದನು; ಹಾಗೆ ಅವು ದೇಶದಲ್ಲಿ ಅತ್ತಿತ್ತ ತಿರುಗಾಡಿದವು.
ಮತ್ತಾಯನು 12:43
ಅಶುದ್ಧಾತ್ಮವು ಒಬ್ಬ ಮನುಷ್ಯನಿಂದ ಹೊರಗೆ ಹೋದ ಮೇಲೆ ನೀರಿಲ್ಲದ ಸ್ಥಳಗಳಲ್ಲಿ ವಿಶ್ರಾಂತಿಗಾಗಿ ತಿರುಗಾಡಿದರೂ ಅದನ್ನು ಕಂಡುಕೊಳ್ಳಲಿಲ್ಲ.
ಪ್ರಕಟನೆ 12:9
ಭೂಲೋಕದವರನ್ನೆಲ್ಲಾ ಮೋಸಗೊಳಿಸುವ ಆ ಮಹಾ ಘಟಸರ್ಪನು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾ ತನ ಸರ್ಪವು ದೊಬ್ಬಲ್ಪಟ್ಟು ಭೂಮಿಗೆ ಬಿದ್ದನು; ಅವನ ದೂತರೂ ಅವನೊಂದಿಗೆ ದೊಬ್ಬಲ್ಪಟ್ಟರು.
ಪ್ರಕಟನೆ 12:12
ಆದದರಿಂದ ಪರಲೋಕಗಳೇ, ಅದರಲ್ಲಿ ವಾಸಮಾಡುವವರೇ, ಹರ್ಷಗೊಳ್ಳಿರಿ. ಭೂಮಿಯ ಮೇಲೆ ಮತ್ತು ಸಮುದ್ರದಲ್ಲಿ ಇರುವವರಿಗೆ ಅಯ್ಯೊ! ಯಾಕಂದರೆ ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದು ಬಂದಿದ್ದಾನೆ ಎಂಬದಾಗಿ ಹೇಳಿತು.
ಪ್ರಕಟನೆ 20:8
ಅವನು ಹೊರಗೆ ಬಂದು ಭೂಮಿಯ ನಾಲ್ಕು ದಿಕ್ಕುಗಳಲ್ಲಿರುವ ಗೋಗ್ ಮಾಗೋಗ್ ಎಂಬ ಜನಾಂಗಗಳನ್ನು ಮರುಳುಗೊಳಿಸಿ ಅವರನ್ನು ಯುದ್ಧಕ್ಕೆ ಕೂಡಿಸುವನು; ಅವರ ಸಂಖ್ಯೆಯು ಸಮುದ್ರದ ಮರಳಿನಷ್ಟಿರುವದು.