Job 31:31
ಅವನ ಮಾಂಸದಿಂದ ನಮಗೆ ತೃಪ್ತಿ ಕೊಡುವವನಾರು ಎಂದು, ನನ್ನ ಗುಡಾರದ ಮನುಷ್ಯರು ಹೇಳಲಿಲ್ಲವೋ?
Job 31:31 in Other Translations
King James Version (KJV)
If the men of my tabernacle said not, Oh that we had of his flesh! we cannot be satisfied.
American Standard Version (ASV)
If the men of my tent have not said, Who can find one that hath not been filled with his meat?
Bible in Basic English (BBE)
If the men of my tent did not say, Who has not had full measure of his meat?
Darby English Bible (DBY)
If the men of my tent said not, Who shall find one that hath not been satisfied with his meat? --
Webster's Bible (WBT)
If the men of my tabernacle have not said, Oh that we had of his flesh! we cannot be satisfied.
World English Bible (WEB)
If the men of my tent have not said, 'Who can find one who has not been filled with his meat?'
Young's Literal Translation (YLT)
If not -- say ye, O men of my tent, `O that we had of his flesh, we are not satisfied.'
| If | אִם | ʾim | eem |
| the men | לֹ֣א | lōʾ | loh |
| of my tabernacle | אָ֭מְרוּ | ʾāmĕrû | AH-meh-roo |
| said | מְתֵ֣י | mĕtê | meh-TAY |
| not, | אָהֳלִ֑י | ʾāhŏlî | ah-hoh-LEE |
| that Oh | מִֽי | mî | mee |
| we had | יִתֵּ֥ן | yittēn | yee-TANE |
| flesh! his of | מִ֝בְּשָׂר֗וֹ | mibbĕśārô | MEE-beh-sa-ROH |
| we cannot | לֹ֣א | lōʾ | loh |
| be satisfied. | נִשְׂבָּֽע׃ | niśbāʿ | nees-BA |
Cross Reference
1 ಸಮುವೇಲನು 24:4
ದಾವೀದನ ಜನರು ಅವನಿಗೆ--ಇಗೋ, ನಾನು ನಿನ್ನ ಶತ್ರುವನ್ನು ನಿನ್ನ ಕಣ್ಣುಗಳಿಗೆ ಸರಿತೋರುವ ಹಾಗೆ ಮಾಡುವದಕ್ಕೆ ಅವನನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಡುವೆನೆಂದು ಕರ್ತನು ನಿನಗೆ ಹೇಳಿದ ದಿವಸವು ಇದೇ ಅಂದರು. ಆಗ ದಾವೀದನು ಎದ್ದು ಹೋಗಿ ಏಕಾಂತವಾಗಿ ಸೌಲನ ನಿಲುವಂಗಿಯ ಅಂಚನ್ನು ಕತ್ತರಿಸಿಕೊಂಡನು.
ಲೂಕನು 9:54
ಆತನ ಶಿಷ್ಯರಾದ ಯಾಕೋಬ ಯೋಹಾನರು ಇದನ್ನು ನೋಡಿ--ಕರ್ತನೇ, ಎಲೀಯನು ಮಾಡಿದ ಪ್ರಕಾರ ಅವರನ್ನು ದಹಿಸಿಬಿಡುವಂತೆ ಆಕಾಶದಿಂದ ಬೆಂಕಿ ಬೀಳುವ ಹಾಗೆ ನಾವು ಅಪ್ಪಣೆಕೊಡಲು ನಿನಗೆ ಮನಸ್ಸುಂಟೋ ಎಂದು ಅವರು ಕೇಳಿದರು.
ಮಿಕ 3:2
ಒಳ್ಳೇದನ್ನು ಹಗೆಮಾಡಿ ಕೆಟ್ಟದ್ದನ್ನು ಪ್ರೀತಿಮಾಡುವವರೇ, ಅವರ ಮೇಲಿನಿಂದ ಅವರ ಚರ್ಮವನ್ನೂ ಅವರ ಎಲುಬುಗಳ ಮೇಲಿನಿಂದ ಅವರ ಮಾಂಸವನ್ನೂ ಕಿತ್ತುಕೊಳ್ಳು ವವರೇ,
ಯೆರೆಮಿಯ 40:15
ಆಗ ಕಾರೇಹನ ಮಗನಾದ ಯೋಹಾನಾನನು ಮಿಚ್ಪದಲ್ಲಿ ರಹಸ್ಯವಾಗಿ ಗೆದಲ್ಯನ ಸಂಗಡಮಾತನಾಡಿ ಹೇಳಿದ್ದೇನಂದರೆ-- ನನ್ನನ್ನು ಹೋಗಗೊಡಿಸು, ನಾನು ನೆತನ್ಯನ ಮಗನಾದ ಇಷ್ಮಾಯೇಲನನ್ನು ಯಾರಿಗೂ ತಿಳಿಯದ ಹಾಗೆ ಕೊಂದುಹಾಕುತ್ತೇನೆ; ಅವನು ನಿನ್ನನ್ನು ಕೊಂದರೆ ನಿನ್ನ ಬಳಿಗೆ ಕೂಡಿಕೊಳ್ಳುವ ಯೆಹೂದ್ಯರೆಲ್ಲರೂ ಚದರಿ ಹೋಗಿ ಯೆಹೂದದಲ್ಲಿ ಉಳಿದವರು ನಾಶವಾಗು ತ್ತಾರಲ್ಲಾ, ಯಾಕೆ ಹೀಗೆ ಆಗಬೇಕು ಎಂದು ವಿಜ್ಞಾಪಿಸಿ ದನು.
ಙ್ಞಾನೋಕ್ತಿಗಳು 1:18
ಅವರು ತಮ್ಮ ಸ್ವಂತ ರಕ್ತಕ್ಕೆ ಹೊಂಚುಹಾಕುತ್ತಾರೆ; ತಮ್ಮ ಪ್ರಾಣಗಳಿಗೆ ರಹಸ್ಯವಾಗಿ ಅಡಗಿಕೊಳ್ಳುತ್ತಾರೆ.
ಙ್ಞಾನೋಕ್ತಿಗಳು 1:11
ಅವರು--ನಮ್ಮೊಂದಿಗೆ ಬಾ, ರಕ್ತಕ್ಕಾಗಿ ಹೊಂಚು ಹಾಕೋಣ, ನಿರಪರಾಧಿಗಳಿಗಾಗಿ ನಿಷ್ಕಾರಣದಿಂದ ರಹಸ್ಯವಾಗಿ ಅಡಗಿಕೊಳ್ಳೋಣ.
ಕೀರ್ತನೆಗಳು 35:25
ಅವರು ತಮ್ಮ ಹೃದಯ ದಲ್ಲಿ--ಹಾ, ನಮ್ಮ ಇಷ್ಟವೇ ನೆರವೇರಿತು ಎಂದು ಹೇಳದಿರಲಿ. ಅವನನ್ನು ನುಂಗಿ ಬಿಟ್ಟೆವೆಂದೂ ಅವರು ಹೇಳದೆ ಇರಲಿ;
ಕೀರ್ತನೆಗಳು 27:2
ನನ್ನ ಮಾಂಸವನ್ನು ತಿನ್ನಬೇಕೆಂದು ದುಷ್ಟರು ಅಂದರೆ ನನ್ನ ವೈರಿಗಳೂ ಶತ್ರುಗಳೂ ಬಂದಾಗ ಅವರು ಎಡವಿಬಿದ್ದರು.
ಯೋಬನು 22:7
ದಣಿದವನಿಗೆ ನೀರನ್ನು ಕುಡಿಯ ಕೊಡಲಿಲ್ಲ; ಹಸಿದವನಿಂದ ರೊಟ್ಟಿಯನ್ನು ಹಿಂದೆ ಗೆದಿದ್ದಿ.
ಯೋಬನು 19:22
ದೇವರ ಹಾಗೆ ನೀವು ಯಾಕೆ ನನ್ನನ್ನು ಹಿಂಸಿಸಿ; ನನ್ನ ಮಾಂಸದಿಂದ ತೃಪ್ತಿಯಾಗದೆ ಇದ್ದೀರಿ.
2 ಸಮುವೇಲನು 19:21
ಆಗ ಚೆರೂಯಳ ಮಗನಾದ ಅಬೀ ಷೈಯು ಪ್ರತ್ಯುತ್ತರವಾಗಿ--ಕರ್ತನ ಅಭಿಷಿಕ್ತನನ್ನು ಶಿಮ್ಮಿಯು ಶಪಿಸಿದ್ದರಿಂದ ಅವನು ಅದಕ್ಕಾಗಿ ಕೊಲ್ಲಲ್ಪಡ ಬೇಕಲ್ಲವೋ ಅಂದನು.
2 ಸಮುವೇಲನು 16:9
ಆಗ ಚೆರೂಯಳ ಮಗನಾದ ಅಬೀಷೈಯು ಅರಸನಿಗೆ--ಈ ಸತ್ತ ನಾಯಿ, ಅರಸನಾದ ನನ್ನ ಒಡೆಯನನ್ನು ದೂಷಿಸುವದೇನು? ನಾನೇ ದಾಟಿಹೋಗಿ ಅವನ ತಲೆಯನ್ನು ತೆಗೆದುಕೊಳ್ಳಲು ಅಪ್ಪಣೆಯಾಗಲಿ ಅಂದನು.
1 ಸಮುವೇಲನು 26:8
ಆಗ ಅಬೀಷೈಯು ದಾವೀ ದನಿಗೆ--ಈ ಹೊತ್ತು ದೇವರು ನಿನ್ನ ಶತ್ರುವನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದಾನೆ; ಈಗ ನಾನು ಅವನನ್ನು ಈಟಿಯಿಂದ ಒಂದೇ ಪೆಟ್ಟಿನಲ್ಲಿ ನೆಲಕ್ಕೆ ಹತ್ತುವಂತೆ ಹೊಡೆಯಲು ಅಪ್ಪಣೆ ಕೊಡಬೇಕು; ಎರಡು ಸಾರಿ ಹೊಡೆಯುವದಿಲ್ಲ ಅಂದನು.
1 ಸಮುವೇಲನು 24:10
ಇಗೋ, ಕರ್ತನು ಈ ಹೊತ್ತು ಗವಿಯಲ್ಲಿ ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟನೆಂಬದನ್ನು ಈ ದಿನ ನಿನ್ನ ಕಣ್ಣುಗಳು ನೋಡಿದವು. ಕೆಲವರು ನಿನ್ನನ್ನು ಕೊಂದುಹಾಕಲು ಹೇಳಿದರು; ಆದರೆ ನನ್ನ ಕಣ್ಣು ನಿನ್ನನ್ನು ಕರುಣಿಸಿತು; ನಾನು--ಅವನು ಕರ್ತನ ಅಭಿಷಿಕ್ತನಾದದರಿಂದ ನನ್ನ ಕೈ ನನ್ನ ಒಡೆಯನಿಗೆ ವಿರೋಧವಾಗಿ ಚಾಚೆನು ಅಂದೆನು.
ಲೂಕನು 22:50
ಅವರಲ್ಲಿ ಒಬ್ಬನು ಪ್ರಧಾನಯಾಜಕನ ಆಳನ್ನು ಹೊಡೆದು ಅವನ ಬಲ ಕಿವಿಯನ್ನು ಕತ್ತರಿಸಿದನು.