Job 32:13
ನಾವು ಜ್ಞಾನವನ್ನು ಕಂಡುಕೊಂಡೆವು; ಮನು ಷ್ಯನಲ್ಲ, ದೇವರು ಅವನನ್ನು ತಳ್ಳುತ್ತಾನೆಂದು ಹೇಳ ಬೇಡಿರಿ.
Job 32:13 in Other Translations
King James Version (KJV)
Lest ye should say, We have found out wisdom: God thrusteth him down, not man.
American Standard Version (ASV)
Beware lest ye say, We have found wisdom; God may vanquish him, not man:
Bible in Basic English (BBE)
Take care that you do not say, Wisdom is here; God may overcome him, but not man.
Darby English Bible (DBY)
That ye may not say, We have found out wisdom; ùGod will make him yield, not man.
Webster's Bible (WBT)
Lest ye should say, We have found out wisdom: God thrusteth him down, not man.
World English Bible (WEB)
Beware lest you say, 'We have found wisdom, God may refute him, not man:'
Young's Literal Translation (YLT)
Lest ye say, We have found wisdom, God doth thrust him away, not man.
| Lest | פֶּן | pen | pen |
| ye should say, | תֹּ֣֭אמְרוּ | tōʾmĕrû | TOH-meh-roo |
| out found have We | מָצָ֣אנוּ | māṣāʾnû | ma-TSA-noo |
| wisdom: | חָכְמָ֑ה | ḥokmâ | hoke-MA |
| God | אֵ֖ל | ʾēl | ale |
| thrusteth him down, | יִדְּפֶ֣נּוּ | yiddĕpennû | yee-deh-FEH-noo |
| not | לֹא | lōʾ | loh |
| man. | אִֽישׁ׃ | ʾîš | eesh |
Cross Reference
ಯೆರೆಮಿಯ 9:23
ಕರ್ತನು ಹೀಗೆ ಹೇಳುತ್ತಾನೆ--ಜ್ಞಾನಿಯು ತನ್ನ ಜ್ಞಾನದಲ್ಲಿ ಹೆಚ್ಚಳಪಡದಿರಲಿ; ಬಲಿಷ್ಟನು ತನ್ನ ಬಲ ದಲ್ಲಿ ಹೆಚ್ಚಳ ಪಡದಿರಲಿ; ಐಶ್ವರ್ಯವಂತನು ತನ್ನ ಐಶ್ವರ್ಯದಲ್ಲಿ ಹೆಚ್ಚಳಪಡದಿರಲಿ.
ಯೆಶಾಯ 48:5
ಆದದರಿಂದಲೇ ಈ ಕಾರ್ಯ ಗಳನ್ನು ನನ್ನ ವಿಗ್ರಹವು ನಡಿಸಿದೆ, ನನ್ನ ಕೆತ್ತಿದ ವಿಗ್ರಹ ಮತ್ತು ಎರಕದ ವಿಗ್ರಹ ಇವುಗಳನ್ನು ವಿಧಿಸಿದೆ ಎಂದು ನೀನು ಹೇಳಿಕೊಳ್ಳದಂತೆ ನಾನು ಪುರಾತನ ಕಾಲದಲ್ಲಿಯೇ ತಿಳಿಸಿದೆನು.
ಯೆಶಾಯ 48:7
ಆರಂಭದಲ್ಲಿ ಆಗದಿದ್ದವುಗಳು ಈಗ ಉಂಟಾಗಿವೆ; ಇಗೋ, ಅವು ನನಗೆ ತಿಳಿದಿದ್ದವೆಂದು ನೀನು ಹೇಳದಂತೆ ಈ ದಿನಕ್ಕೆ ಮುಂಚೆಯೇ ಅವು ಗಳನ್ನು ಕುರಿತು ನಿನಗೆ ಕೇಳಗೊಡಿಸಲಿಲ್ಲ.
ಯೆಹೆಜ್ಕೇಲನು 28:3
ಇಗೋ, ನೀನು ದಾನಿಯೇಲನಿಗಿಂತ ಜ್ಞಾನಿಯಾಗಿರುವೆ; ರಹಸ್ಯವಾದದ್ದು ಏನಿದ್ದರೂ ನಿನಗೆ ಮರೆಯಾಗಿರುವದಿಲ್ಲ.
ಜೆಕರ್ಯ 12:7
ಇದಲ್ಲದೆ ದಾವೀದನ ಮನೆಯ ಘನತೆಯೂ ಯೆರೂಸಲೇಮಿನ ನಿವಾಸಿಗಳ ಗೌರವವೂ ಯೆಹೂದಕ್ಕೆ ವಿರೋಧವಾಗಿ ಹೆಚ್ಚಳ ಪಡದ ಹಾಗೆ ಕರ್ತನು ಮೊದಲು ಯೆಹೂದದ ಗುಡಾರಗಳನ್ನು ರಕ್ಷಿಸುವನು.
ಯೋಹಾನನು 19:11
ಅದಕ್ಕೆ ಯೇಸು--ಮೇಲಿನಿಂದ ನಿನಗೆ ಕೊಡಲ್ಪಡದಿದ್ದರೆ ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ. ಆದಕಾರಣ ನನ್ನನ್ನು ನಿನಗೆ ಒಪ್ಪಿಸಿದವನಿಗೆ ಹೆಚ್ಚಾದ ಪಾಪ ಉಂಟು ಎಂದು ಉತ್ತರ ಕೊಟ್ಟನು.
1 ಕೊರಿಂಥದವರಿಗೆ 1:19
ನಾನು ಜ್ಞಾನಿಗಳ ಜ್ಞಾನವನ್ನು ನಾಶಮಾಡುವೆನು; ವಿವೇಕಿಗಳ ವಿವೇಕವನ್ನು ಇಲ್ಲದಂತಾಗ ಮಾಡುವೆನು ಎಂದು ಬರೆಯಲ್ಪಟ್ಟಿದೆ.
1 ಕೊರಿಂಥದವರಿಗೆ 1:27
ಆದರೆ ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾನೆ; ದೇವರು ಬಲಿಷ್ಟರನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾನೆ;
1 ಕೊರಿಂಥದವರಿಗೆ 3:18
ಯಾವನೂ ತನ್ನನ್ನು ತಾನೇ ಮೋಸಗೊಳಿಸ ದಿರಲಿ; ನಿಮ್ಮಲ್ಲಿ ಯಾವನಾದರೂ ಈ ಲೋಕ ಸಂಬಂಧವಾಗಿ ಜ್ಞಾನಿಯಾಗಿದ್ದೇನೆಂದು ಭಾವಿಸಿ ಕೊಂಡರೆ ಜ್ಞಾನಿಯಾಗುವಂತೆ ಹುಚ್ಚನಾಗಲಿ.
ಯೆಶಾಯ 5:21
ತಮ್ಮ ಸ್ವಂತ ಕಣ್ಣುಗಳಲ್ಲಿ ಜ್ಞಾನಿಗಳೂ ಸ್ವಂತ ದೃಷ್ಟಿಯಲ್ಲಿ ವಿವೇಕಿಗಳೂ ಆಗಿರುವವರಿಗೆ ಅಯ್ಯೋ!
ಯೋಬನು 19:21
ನನ್ನ ಸ್ನೇಹಿತರಾದ ನೀವೇ ನನ್ನನ್ನು ಕನಿಕರಿಸಿರಿ, ನನ್ನನ್ನು ಕನಿಕರಿಸಿರಿ; ಯಾಕಂದರೆ ದೇವರ ಕೈ ನನ್ನನ್ನು ಮುಟ್ಟಿದೆ.
ನ್ಯಾಯಸ್ಥಾಪಕರು 7:2
ಆಗ ಕರ್ತನು ಗಿದ್ಯೋನನಿಗೆ--ನಾನು ಮಿದ್ಯಾನ್ಯ ರನ್ನು ಜನರ ಕೈಗಳಿಗೆ ಒಪ್ಪಿಸಿಕೊಡುವದಕ್ಕೆ ನಿನ್ನ ಸಂಗಡ ಇರುವ ಜನರು ಬಹಳವಾಗಿದ್ದಾರೆ; ಇಸ್ರಾಯೇಲ್ಯರುನನ್ನ ಕೈ ನನ್ನನ್ನು ರಕ್ಷಿಸಿತು ಎಂದು ನನಗೆ ವಿರೋಧವಾಗಿ ಹೆಚ್ಚಳ ಪಟ್ಟಾರು.
ಯೋಬನು 1:21
ಬೆತ್ತಲೆಯಾಗಿ ನನ್ನ ತಾಯಿಯ ಗರ್ಭ ದಿಂದ ಹೊರಟು ಬಂದೆನು, ಬೆತ್ತಲೆಯಾಗಿ ತಿರುಗಿ ಹೋಗಬೇಕು. ಕರ್ತನು ಕೊಟ್ಟನು, ಕರ್ತನು ತಕ್ಕೊಂಡನು; ಕರ್ತನ ಹೆಸರಿಗೆ ಸ್ತೋತ್ರ ಅಂದನು.
ಯೋಬನು 2:10
ಆದರೆ ಅವನು ಅವಳಿಗೆ--ಮೂರ್ಖ ಹೆಂಗಸರಲ್ಲಿ ಒಬ್ಬಳು ಮಾತನಾಡುವ ಪ್ರಕಾರ ನೀನೂ ಮಾತನಾಡುವಿಯಾ? ದೇವರ ಕೈಯಿಂದ ಒಳ್ಳೇದನ್ನು ಹೊಂದುತ್ತೇವಲ್ಲಾ? ಕೆಟ್ಟದ್ದನ್ನು ಹೊಂದುವದು ಬೇಡವೋ ಅಂದನು. ಇವೆಲ್ಲವುಗಳಲ್ಲಿ ಯೋಬನು ತನ್ನ ತುಟಿಗಳಿಂದ ಪಾಪಮಾಡಲಿಲ್ಲ.
ಯೋಬನು 4:9
ದೇವರ ಸಿಡಿತದಿಂದ ಅವರು ನಾಶವಾಗುತ್ತಾರೆ. ಆತನ ಮೂಗಿನ ಉಸಿರಿ ನಿಂದ ಅವರು ಕ್ಷಯಿಸಿಹೋಗುತ್ತಾರೆ,
ಯೋಬನು 6:4
ಸರ್ವ ಶಕ್ತನ ಬಾಣಗಳು ನನ್ನಲ್ಲಿ ಇವೆ; ಅವುಗಳ ವಿಷವು ನನ್ನ ಆತ್ಮವನ್ನು ಕುಡಿಯುತ್ತವೆ; ದೇವರ ಹೆದರಿಕೆಗಳು ನನಗೆ ವಿರೋಧವಾಗಿ ನನ್ನ ಸುತ್ತಲೂ ಇಳಿದವು.
ಯೋಬನು 12:2
ನಿಸ್ಸಂದೇಹವಾಗಿ ನೀವೇ ಆ ಜನರು; ನಿಮ್ಮ ಸಂಗಡಲೇ ಜ್ಞಾನವು ಸಾಯುವದು.
ಯೋಬನು 15:8
ದೇವರ ಗುಟ್ಟನ್ನು ಕೇಳಿದ್ದೀಯೋ? ಜ್ಞಾನವನ್ನು ನಿನಗೆ ನೀನೇ ಇಟ್ಟುಕೊಂಡಿದ್ದೀಯೋ?
ಯೋಬನು 19:6
ದೇವರು ನನ್ನನ್ನು ತೊಲಗಿಸಿಬಿಟ್ಟು, ತನ್ನ ಬಲೆಯನ್ನು ನನ್ನ ಮೇಲೆ ಬೀಸಿದನೆಂದು ತಿಳಿಯಬೇಕಷ್ಟೆ.
ಆದಿಕಾಂಡ 14:23
ನಿನ್ನವುಗಳಲ್ಲಿ ನೂಲು ಮೊದಲುಗೊಂಡು ಕೆರದ ಬಾರನ್ನು ಸಹ ನಾನು ತಕ್ಕೊಳ್ಳುವದಿಲ್ಲ. ಯಾಕಂದರೆ--ನಾನು ಅಬ್ರಾಮನನ್ನು ಐಶ್ವರ್ಯವಂತನನ್ನಾಗಿ ಮಾಡಿದ್ದೇನೆ ಎಂದು ನೀನು ಹೇಳಬಾರದು.