Index
Full Screen ?
 

ಯೋಬನು 4:13

Job 4:13 in Tamil ಕನ್ನಡ ಬೈಬಲ್ ಯೋಬನು ಯೋಬನು 4

ಯೋಬನು 4:13
ರಾತ್ರಿಯ ದರ್ಶನಗಳ ಆಲೋಚನೆಗಳಲ್ಲಿ ಗಾಢ ನಿದ್ರೆಯು ಜನರ ಮೇಲೆ ಬೀಳುವಾಗ

In
thoughts
בִּ֭שְׂעִפִּיםbiśʿippîmBEES-ee-peem
from
the
visions
מֵֽחֶזְיֹנ֣וֹתmēḥezyōnôtmay-hez-yoh-NOTE
night,
the
of
לָ֑יְלָהlāyĕlâLA-yeh-la
when
deep
sleep
בִּנְפֹ֥לbinpōlbeen-FOLE
falleth
תַּ֝רְדֵּמָ֗הtardēmâTAHR-day-MA
on
עַלʿalal
men,
אֲנָשִֽׁים׃ʾănāšîmuh-na-SHEEM

Cross Reference

ಯೋಬನು 33:14
ಒಂದು ಸಾರಿ ಹೌದು, ಎರಡು ಸಾರಿ ದೇವರು ಮಾತನಾಡುತ್ತಾನೆ; ಆದರೂ ಮನುಷ್ಯನು ಅದನ್ನು ಗ್ರಹಿಸಿಕೊಳ್ಳುವದಿಲ್ಲ.

ಆದಿಕಾಂಡ 15:12
ಸೂರ್ಯನು ಅಸ್ತಮಿಸಲಾಗಿ ಅಬ್ರಾಮನಿಗೆ ಗಾಢನಿದ್ರೆ ಹತ್ತಿತು. ಆಗ ಇಗೋ, ಭಯದ ಘೋರಾಂಧಕಾರವು ಅವನ ಮೇಲೆ ಕವಿಯಿತು.

ಆದಿಕಾಂಡ 2:21
ಕರ್ತನಾದ ದೇವರು ಆದಾಮನಿಗೆ ಗಾಢನಿದ್ರೆ ಬರಮಾಡಿದ್ದರಿಂದ ಅವನು ನಿದ್ರೆಮಾಡಿದನು; ಆಗ ಆತನು ಅವನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತಕ್ಕೊಂಡು ಅದಕ್ಕೆ ಬದಲಾಗಿ ಮಾಂಸವನ್ನು ಮುಚ್ಚಿದನು.

ದಾನಿಯೇಲನು 10:9
ಆದಾಗ್ಯೂ ನಾನು ಆತನ ಮಾತುಗಳ ಧ್ವನಿಯನ್ನು ಕೇಳಿದೆನು, ಮತ್ತು ಆತನ ಮಾತುಗಳ ಧ್ವನಿಯನ್ನು ಕೇಳಿದಾಗ ಮುಖ ಕೆಳಗೆ ಮಾಡಿ ಗಾಢನಿದ್ರೆಯಲ್ಲಿದ್ದೆನು. ನನ್ನ ಮುಖ ನೆಲದ ಕಡೆಗೆ ಇತ್ತು.

ದಾನಿಯೇಲನು 8:18
ಈಗ ಅವನು ನನ್ನ ಸಂಗಡ ಮಾತನಾಡುತ್ತಿರುವಾಗ ನಾನು ಮುಖ ಕೆಳಗಾಗಿ ನೆಲದ ಮೇಲೆ ಗಾಢ ನಿದ್ರೆಯಲ್ಲಿ ಬಿದ್ದಿದ್ದೆನು; ಆದರೆ ಅವನು ನನ್ನನ್ನು ಮುಟ್ಟಿ ನಾನು ನಿಂತುಕೊಳ್ಳುವಂತೆ ಮಾಡಿದನು.

ದಾನಿಯೇಲನು 4:5
ನನ್ನನ್ನು ಭಯಪಡಿಸುವಂತೆ ನಾನು ಒಂದು ಕನಸನ್ನು ಕಂಡೆನು. ನನ್ನ ಹಾಸಿಗೆಯ ಮೇಲೆ ಆದ ಯೋಚನೆಗಳು ನನ್ನ ಮನಸ್ಸಿನ ದರ್ಶನ ಗಳು ನನ್ನನ್ನು ಕಳವಳಪಡಿಸಿದವು.

ದಾನಿಯೇಲನು 2:28
ಆದರೆ ಈ ರಹಸ್ಯಗಳನ್ನು ಪ್ರಕಟಪಡಿಸುವಂತ ದೇವರು ಪರಲೋಕದಲ್ಲಿದ್ದಾನೆ; ಆತನು ದಿವಸಗಳ ಅಂತ್ಯದಲ್ಲಿ ಸಂಭವಿಸುವಂತವುಗಳನ್ನು ಅರಸನಾದ ನೆಬೂಕದ್ನೆಚ್ಚ ರನಿಗೆ ತಿಳಿಯಪಡಿಸುತ್ತಾನೆ. ನಿನ್ನ ಕನಸಿನಲ್ಲಿ, ನಿನ್ನ ಹಾಸಿಗೆಯಲ್ಲಿ ಬಂದ ನಿನ್ನ ಮನಸ್ಸಿನ ದರ್ಶನಗಳು ಇವೇ ಆಗಿವೆ,

ದಾನಿಯೇಲನು 2:19
ಆಗ ಆ ರಹಸ್ಯವು ದಾನಿಯೇಲನಿಗೆ ರಾತ್ರಿ ದರ್ಶನ ದಲ್ಲಿ ಪ್ರಕಟವಾಯಿತು; ಆಗ ದಾನಿಯೇಲನು ಪರಲೋಕ ದೇವರನ್ನು ಸ್ತುತಿಸಿದನು.

ಅರಣ್ಯಕಾಂಡ 22:19
ಆದರೆ ಈಗ ಕರ್ತನು ನನಗೆ ಮತ್ತೇನು ಹೇಳುವನೆಂದು ನಾನು ತಿಳುಕೊಳ್ಳುವ ಹಾಗೆ ನೀವು ಸಹ ದಯಮಾಡಿ ಈ ರಾತ್ರಿ ಇಲ್ಲಿ ಇಳುಕೊಳ್ಳಿರಿ ಅಂದನು.

ಅರಣ್ಯಕಾಂಡ 12:6
ಆತನು--ನನ್ನ ಮಾತುಗಳನ್ನು ಈಗ ಕೇಳಿರಿ--ನಿಮ್ಮಲ್ಲಿ ಒಬ್ಬ ಪ್ರವಾದಿ ಇದ್ದರೆ ಕರ್ತನಾದ ನಾನು ದರ್ಶನದಲ್ಲಿ ಅವನಿಗೆ ತಿಳಿಯಪಡಿಸುವೆನು, ಸ್ವಪ್ನದಲ್ಲಿ ಅವನ ಸಂಗಡ ಮಾತನಾಡುವೆನು.

ಆದಿಕಾಂಡ 46:2
ದೇವರು ಇಸ್ರಾಯೇಲನಿಗೆ ರಾತ್ರಿ ದರ್ಶನ ದಲ್ಲಿ ಮಾತನಾಡಿ--ಯಾಕೋಬನೇ, ಯಾಕೋಬನೇ ಅಂದನು. ಅದಕ್ಕವನು--ಇಗೋ, ಇದ್ದೇನೆ ಅಂದನು.

ಆದಿಕಾಂಡ 31:24
ಆ ರಾತ್ರಿ ದೇವರು ಸ್ವಪ್ನದಲ್ಲಿ ಅರಾಮ್ಯನಾದ ಲಾಬಾನನ ಬಳಿಗೆ ಬಂದು ಅವನಿಗೆ--ನೀನು ಯಾಕೋಬನ ಸಂಗಡ ಒಳ್ಳೆಯದನ್ನಾಗಲಿ ಕೆಟ್ಟದನ್ನಾಗಲಿ ಮಾತನಾಡದಂತೆ ಎಚ್ಚರಿಕೆಯಾಗಿರು ಅಂದನು.

ಆದಿಕಾಂಡ 28:12
ಆಗ ಅವನು ಕನಸು ಕಂಡನು. ಇಗೋ, ಏಣಿಯು ಭೂಮಿಯ ಮೇಲೆ ನಿಲ್ಲಿಸಲ್ಪಟ್ಟಿತ್ತು. ಅದರ ತುದಿಯು ಆಕಾಶಕ್ಕೆ ಮುಟ್ಟಿತ್ತು. ಇಗೋ, ದೇವದೂತರು ಅದರ ಮೇಲೆ ಏರುತ್ತಾ ಇಳಿಯುತ್ತಾ ಇದ್ದರು.

ಆದಿಕಾಂಡ 20:3
ಆಗ ದೇವರು ರಾತ್ರಿ ಕನಸಿನಲ್ಲಿ ಅಬೀಮೆಲೆಕನ ಬಳಿಗೆ ಬಂದು--ಇಗೋ, ನೀನು ತಕ್ಕೊಂಡ ಆ ಸ್ತ್ರೀಗೋಸ್ಕರ ನೀನು ಸತ್ತವನೇ; ಆಕೆಯು ಒಬ್ಬ ಮನುಷ್ಯನ ಹೆಂಡತಿ ಎಂದು ಅವನಿಗೆ ಹೇಳಿದನು.

Chords Index for Keyboard Guitar