Matthew 11:18
ಯಾಕಂದರೆ ಯೋಹಾನನು ತಿನ್ನದೆಯೂ ಕುಡಿಯದೆಯೂ ಬಂದನು. ಅದಕ್ಕೆ ಅವರು--ಅವನಿಗೆ ದೆವ್ವ ಹಿಡಿದಿದೆ ಅನ್ನುತ್ತಾರೆ.
Matthew 11:18 in Other Translations
King James Version (KJV)
For John came neither eating nor drinking, and they say, He hath a devil.
American Standard Version (ASV)
For John came neither eating nor drinking, and they say, He hath a demon.
Bible in Basic English (BBE)
For John came, taking no food or drink, and they say, He has an evil spirit.
Darby English Bible (DBY)
For John has come neither eating nor drinking, and they say, He has a demon.
World English Bible (WEB)
For John came neither eating nor drinking, and they say, 'He has a demon.'
Young's Literal Translation (YLT)
`For John came neither eating nor drinking, and they say, He hath a demon;
| For | ἦλθεν | ēlthen | ALE-thane |
| John | γὰρ | gar | gahr |
| came | Ἰωάννης | iōannēs | ee-oh-AN-nase |
| neither | μήτε | mēte | MAY-tay |
| eating | ἐσθίων | esthiōn | ay-STHEE-one |
| nor | μήτε | mēte | MAY-tay |
| drinking, | πίνων | pinōn | PEE-none |
| and | καὶ | kai | kay |
| they say, | λέγουσιν | legousin | LAY-goo-seen |
| He hath | Δαιμόνιον | daimonion | thay-MOH-nee-one |
| a devil. | ἔχει | echei | A-hee |
Cross Reference
ಲೂಕನು 1:15
ಯಾಕಂದರೆ ಅವನು ಕರ್ತನ ದೃಷ್ಟಿಯಲ್ಲಿ ದೊಡ್ಡವ ನಾಗಿದ್ದು ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿ ಯುವದೇ ಇಲ್ಲ; ಅವನು ತಾಯಿಯ ಗರ್ಭದಿಂದಲೇ ಪರಿಶುದ್ಧಾತ್ಮಭರಿತನಾಗಿರುವನು.
ಮತ್ತಾಯನು 3:4
ಈ ಯೋಹಾನನಿಗೆ ಒಂಟೇ ಕೂದಲಿನ ಉಡುಪೂ ಸೊಂಟಕ್ಕೆ ಚರ್ಮದ ನಡುಕಟ್ಟೂ ಇದ್ದವು; ಮತ್ತು ಮಿಡತೆಗಳೂ ಕಾಡು ಜೇನೂ ಇವನಿಗೆ ಆಹಾರವಾಗಿದ್ದವು.
ಯೋಹಾನನು 10:20
ಅವರಲ್ಲಿ ಅನೇಕರು--ಅವನಿಗೆ ದೆವ್ವ ಹಿಡಿದದೆ ಮತ್ತು ಹುಚ್ಚನಾಗಿ ದ್ದಾನೆ; ನೀವು ಯಾಕೆ ಅವನ ಮಾತನ್ನು ಕೇಳುತ್ತೀರಿ ಅಂದರು.
ಯೋಹಾನನು 8:48
ಆಗ ಯೆಹೂದ್ಯರು ಪ್ರತ್ಯುತ್ತರವಾಗಿ ಆತನಿಗೆ--ನೀನು ಸಮಾರ್ಯನು ಮತ್ತು ನಿನಗೆ ದೆವ್ವ ಹಿಡಿದದೆ ಎಂದು ನಾವು ಹೇಳುವದು ಸರಿಯಲ್ಲವೋ ಎಂದು ಹೇಳಿದರು.
ಯೋಹಾನನು 7:20
ಅದಕ್ಕೆ ಜನರು ಪ್ರತ್ಯುತ್ತರವಾಗಿ--ನಿನಗೆ ದೆವ್ವ ಹಿಡಿದಿದೆ; ನಿನ್ನನ್ನು ಕೊಲ್ಲುವದಕ್ಕೆ ನೋಡು ವವರು ಯಾರು ಅಂದರು.
1 ಕೊರಿಂಥದವರಿಗೆ 9:27
ಆದರೆ ನಾನು ಬೇರೆಯವರಿಗೆ ಸಾರಿದ ಮೇಲೆ ಯಾವ ವಿಧದಲ್ಲಿಯೂ ನಾನು ಭ್ರಷ್ಠನಾಗದಂತೆ ನನ್ನ ದೇಹವನ್ನು ಅಧೀನತೆಯಲ್ಲಿಟ್ಟು ಅದನ್ನು ಸ್ವಾಧೀನಪಡಿಸಿಕೊಳ್ಳುತ್ತೇನೆ.
ಅಪೊಸ್ತಲರ ಕೃತ್ಯಗ 26:24
ಅವನು ಈ ರೀತಿಯಾಗಿ ಪ್ರತಿವಾದ ಮಾಡು ತ್ತಿದ್ದಾಗ ಫೆಸ್ತನು ಮಹಾಶಬ್ದದಿಂದ--ಪೌಲನೇ, ನೀನು ಭ್ರಮೆಗೊಂಡಿದ್ದೀ; ಅತಿಶಯ ಜ್ಞಾನವು ನಿನ್ನನ್ನು ಹುಚ್ಚನನ್ನಾಗಿ ಮಾಡಿದೆ ಎಂದು ಹೇಳಿದನು.
ಮತ್ತಾಯನು 10:25
ಶಿಷ್ಯನು ತನ್ನ ಗುರುವಿನಂತೆಯೂ ಸೇವಕನು ತನ್ನ ಯಜಮಾನನಂತೆಯೂ ಇರುವದು ಸಾಕು; ಮನೆಯ ಯಜಮಾನನನ್ನೇ ಅವರು ಬೆಲ್ಜೆಬೂಲನೆಂದು ಕರೆದರೆ ಅವನ ಮನೆಯವರನ್ನು ಇನ್ನೂ ಎಷ್ಟೋ ಹೆಚ್ಚಾಗಿ ಕರೆಯುವರಲ್ಲವೇ?
ಹೋಶೇ 9:7
ವಿಚಾರಣೆಯ ದಿನಗಳು ಬಂದಿವೆ, ಮುಯ್ಯಿ ತೀರಿಸುವ ದಿನಗಳೂ ಬಂದಿವೆ. ಇಸ್ರಾ ಯೇಲು ಅದನ್ನು ತಿಳಿದುಕೊಳ್ಳುವದು, ನಿನ್ನ ಅಕ್ರಮ ಗಳು ಬಹಳವಾಗಿರುವದರಿಂದಲೂ ಹಗೆತನವು ಹೆಚ್ಚಾ ಗಿರುವದರಿಂದಲೂ ಪ್ರವಾದಿ ಮೂರ್ಖನೂ ಆತ್ಮೀಯ ಮನುಷ್ಯನೂ ಹುಚ್ಚನೂ ಎಂದು ಇಸ್ರಾಯೇಲು ತಿಳಿದುಕೊಳ್ಳುತ್ತದೆ.
ಯೆರೆಮಿಯ 29:26
ಹುಚ್ಚನಾದ ತನ್ನನ್ನು ಪ್ರವಾದಿಯಾಗಿ ಮಾಡಿಕೊಳ್ಳುವಂಥ ಪ್ರತಿ ಮನುಷ್ಯ ನಿಗೆ ಕರ್ತನ ಆಲಯದಲ್ಲಿ ಅಧಿಕಾರಿಗಳು ಇರುವ ಹಾಗೆಯೂ ನೀನು ಅಂಥವರನ್ನು ಕೊಳದಲ್ಲಿಯೂ ಸೆರೆಯಲ್ಲಿಯೂ ಇಡುವ ಹಾಗೆಯೂ ಕರ್ತನು ಯಾಜಕ ನಾದ ಯೆಹೋಯಾದನಿಗೆ ಬದಲಾಗಿ ನಿನ್ನನ್ನು ಯಾಜಕ ನನ್ನಾಗಿ ಇಟ್ಟಿದ್ದಾನೆ.
ಯೆರೆಮಿಯ 16:8
ಅವರ ಸಂಗಡ ಕೂತುಕೊಂಡು ಉಣ್ಣುವದಕ್ಕೂ ಕುಡಿಯುವದಕ್ಕೂ ಔತಣದ ಮನೆಯಲ್ಲಿ ಪ್ರವೇಶಿಸ ಬೇಡ.
ಯೆರೆಮಿಯ 15:17
ನಾನು ಹಾಸ್ಯಗಾರರ ಕೂಟದಲ್ಲಿ ಕೂತುಕೊಂಡು ಉತ್ಸಾಹಪಡಲಿಲ್ಲ, ನಿನ್ನ ಕೈ ನಿಮಿತ್ತ ಒಂಟಿಯಾಗಿ ಕೂತುಕೊಂಡಿದ್ದೇನೆ; ನನ್ನನ್ನು ಉಗ್ರತೆಯಿಂದ ತುಂಬಿಸಿದ್ದೀ.
2 ಅರಸುಗಳು 9:11
ಆಗ ಯೇಹುವು ತನ್ನ ಯಜಮಾನನ ಸೇವಕರ ಬಳಿಗೆ ಹೊರಟು ಬಂದನು. ಅವರು ಅವನಿಗೆ ಎಲ್ಲವೂ ಕ್ಷೇಮವೋ? ಈ ಹುಚ್ಚನು ನಿನ್ನ ಬಳಿಗೆ ಬಂದದ್ದೇನು ಅಂದರು. ಅವನು ಅವರಿಗೆ--ಆ ಮನುಷ್ಯನನ್ನೂ ಅವನ ಮಾತನ್ನೂ ನೀವು ಬಲ್ಲಿರಿ ಅಂದನು.