Psalm 102:4
ನನ್ನ ಹೃದಯವು ಹೊಡೆಯಲ್ಪಟ್ಟ ಹುಲ್ಲಿನ ಹಾಗೆ ಒಣಗಿಹೋಗಿದೆ; ಆದದರಿಂದ ನಾನು ನನ್ನ ರೊಟ್ಟಿಯನ್ನು ತಿನ್ನುವದಕ್ಕೆ ಮರೆತುಬಿಡುತ್ತೇನೆ.
Psalm 102:4 in Other Translations
King James Version (KJV)
My heart is smitten, and withered like grass; so that I forget to eat my bread.
American Standard Version (ASV)
My heart is smitten like grass, and withered; For I forget to eat my bread.
Bible in Basic English (BBE)
My heart is broken; it has become dry and dead like grass, so that I give no thought to food.
Darby English Bible (DBY)
My heart is smitten and withered like grass; yea, I have forgotten to eat my bread.
World English Bible (WEB)
My heart is blighted like grass, and withered, For I forget to eat my bread.
Young's Literal Translation (YLT)
Smitten as the herb, and withered, is my heart, For I have forgotten to eat my bread.
| My heart | הוּכָּֽה | hûkkâ | hoo-KA |
| is smitten, | כָ֭עֵשֶׂב | kāʿēśeb | HA-ay-sev |
| and withered | וַיִּבַ֣שׁ | wayyibaš | va-yee-VAHSH |
| like grass; | לִבִּ֑י | libbî | lee-BEE |
| so | כִּֽי | kî | kee |
| that I forget | שָׁ֝כַ֗חְתִּי | šākaḥtî | SHA-HAHK-tee |
| to eat | מֵאֲכֹ֥ל | mēʾăkōl | may-uh-HOLE |
| my bread. | לַחְמִֽי׃ | laḥmî | lahk-MEE |
Cross Reference
ಕೀರ್ತನೆಗಳು 37:2
ಅವರು ಹುಲ್ಲಿನ ಹಾಗೆ ಬೇಗ ಕೊಯ್ಯಲ್ಪಟ್ಟು ಹಸುರಾದ ಸೊಪ್ಪಿನ ಹಾಗೆ ಬಾಡಿಹೋಗುವರು.
ಯೆಶಾಯ 40:7
ಹುಲ್ಲು ಒಣಗಿ ಹೋಗು ವದು ಹೂವು ಬಾಡಿಹೋಗುವದು. ಕರ್ತನ ಆತ್ಮ ಅವುಗಳ ಮೇಲೆ ಊದುವನು; ನಿಶ್ಚಯವಾಗಿ ಜನರು ಹುಲ್ಲೇ.
ಎಜ್ರನು 10:6
ಎಜ್ರನು ದೇವರ ಆಲಯದ ಮುಂದಿ ನಿಂದ ಎದ್ದು ಎಲ್ಯಾಷೀಬಿನ ಮಗನಾದ ಯೆಹೋಹಾ ನಾನನ ಕೊಠಡಿಯಲ್ಲಿ ಪ್ರವೇಶಿಸಿ ಅಲ್ಲಿಗೆ ಬಂದಾಗ ರೊಟ್ಟಿಯನ್ನು ತಿನ್ನದೆ ನೀರನ್ನು ಕುಡಿಯದೆ ಇದ್ದನು; ಯಾಕಂದರೆ ಸೆರೆಯಾಗಿ ಒಯ್ಯಲ್ಪಟ್ಟವರ ಅಕೃತ್ಯಕ್ಕೋಸ್ಕರ ದುಃಖಿಸಿದನು.
ಕೀರ್ತನೆಗಳು 102:11
ನನ್ನ ದಿವಸಗಳು ನೀಳದ ನೆರಳಿನ ಹಾಗಿವೆ; ನಾನು ಹುಲ್ಲಿನ ಹಾಗೆ ಒಣಗುತ್ತೇನೆ.
ಕೀರ್ತನೆಗಳು 143:3
ಶತ್ರುವು ನನ್ನ ಪ್ರಾಣವನ್ನು ಹಿಂಸಿಸಿ ನನ್ನ ಜೀವವನ್ನು ನೆಲಕ್ಕೆ ಜಜ್ಜಿ ಬಹುಕಾಲದ ಹಿಂದೆ ಸತ್ತವರ ಹಾಗೆ, ಕತ್ತಲೆಯಲ್ಲಿ ನಾನು ವಾಸಿಸುವಂತೆ ಮಾಡಿದ್ದಾನೆ.
ಪ್ರಲಾಪಗಳು 3:13
ಆತನು ತನ್ನ ಬತ್ತಳಿಕೆಯಲ್ಲಿನ ಬಾಣಗಳು ನನ್ನ ಅಂತರಂಗಗಳಲ್ಲಿ ತೂರಿಹೋಗುವ ಹಾಗೆ ಮಾಡಿ ದ್ದಾನೆ.
ಪ್ರಲಾಪಗಳು 3:20
ನನ್ನ ಪ್ರಾಣವು ಇನ್ನೂ ಅವುಗಳನ್ನು ಜ್ಞಾಪಿಸಿ ಕೊಳ್ಳುತ್ತಾ ನನ್ನೊಳಗೆ ಕುಂದಿಹೋಗಿದೆ.
ಮತ್ತಾಯನು 26:37
ಆತನು ತನ್ನ ಜೊತೆಯಲ್ಲಿ ಪೇತ್ರನನ್ನೂ ಜೆಬೆದಾಯನ ಇಬ್ಬರು ಕುಮಾರರನ್ನೂ ಕರೆದುಕೊಂಡು ಹೋಗಿ ದುಃಖಿಸುವದಕ್ಕೂ ಬಹು ವ್ಯಥೆಪಡುವದಕ್ಕೂ ಆರಂಭಿಸಿದನು.
ಅಪೊಸ್ತಲರ ಕೃತ್ಯಗ 9:9
ಅವನು ಮೂರು ದಿವಸ ಕಣ್ಣು ಕಾಣದೆ ಏನೂ ತಿನ್ನಲಿಲ್ಲ, ಏನೂ ಕುಡಿಯಲಿಲ್ಲ.
ಕೀರ್ತನೆಗಳು 102:9
ನಿನ್ನ ರೋಷದ ಮತ್ತು ನಿನ್ನ ರೌದ್ರದ ನಿಮಿತ್ತವೇ ಬೂದಿಯನ್ನು ರೊಟ್ಟಿಯಂತೆ ತಿಂದಿದ್ದೇನೆ; ನನ್ನ ಪಾನವನ್ನು ಕಣ್ಣೀರಿನಿಂದ ಬೆರೆಸಿ ದ್ದೇನೆ.
ಕೀರ್ತನೆಗಳು 77:3
ನಾನು ವ್ಯಥೆಪಡುತ್ತಾ ದೇವರನ್ನು ಜ್ಞಾಪಕಮಾಡಿಕೊಂಡೆನು. ನಾನು ಚಿಂತಿ ಸುವದರಿಂದ ನನ್ನ ಆತ್ಮವು ಬಳಲಿ ಹೋಗಿದೆ ಸೆಲಾ.
2 ಸಮುವೇಲನು 12:17
ಅವನನ್ನು ಎಬ್ಬಿಸುವದಕ್ಕೆ ಅವನ ಮನೆಯ ಹಿರಿಯರು ಅವನ ಬಳಿಗೆ ಬಂದರು; ಆದರೆ ಅವನಿಗೆ ಮನಸ್ಸಿಲ್ಲದೆ ಇತ್ತು. ಅವರ ಸಂಗಡ ಭೋಜನ ಮಾಡದೆ ಹೋದನು.
ಯೋಬನು 6:4
ಸರ್ವ ಶಕ್ತನ ಬಾಣಗಳು ನನ್ನಲ್ಲಿ ಇವೆ; ಅವುಗಳ ವಿಷವು ನನ್ನ ಆತ್ಮವನ್ನು ಕುಡಿಯುತ್ತವೆ; ದೇವರ ಹೆದರಿಕೆಗಳು ನನಗೆ ವಿರೋಧವಾಗಿ ನನ್ನ ಸುತ್ತಲೂ ಇಳಿದವು.
ಯೋಬನು 10:1
ನನ್ನ ಪ್ರಾಣವು ನನ್ನ ಜೀವನಕ್ಕಾಗಿ ಬೇಸರಗೊಂಡಿದೆ. ನನ್ನ ದೂರುಗಳನ್ನು ನನ್ನ ಮೇಲೆಯೇ ಬಿಡುವೆನು; ನನ್ನ ಮನೋವ್ಯಥೆ ಯಿಂದ ಮಾತನಾಡುವೆನು.
ಯೋಬನು 33:20
ಅವನ ಜೀವಕ್ಕೆ ರೊಟ್ಟಿಯೂ ಅವನ ಪ್ರಾಣಕ್ಕೆ ಸವಿ ಊಟವೂ ಅಸಹ್ಯವಾಗಿವೆ.
ಕೀರ್ತನೆಗಳು 6:2
ಓ ಕರ್ತನೇ, ನನ್ನ ಮೇಲೆ ದಯವಿಡು; ಯಾಕಂದರೆ ನಾನು ಬಲಹೀನನಾಗಿದ್ದೇನೆ. ಓ ಕರ್ತನೇ, ನನ್ನನ್ನು ಸ್ವಸ್ಥಮಾಡು, ನನ್ನ ಎಲುಬುಗಳು ತಲ್ಲಣಿಸುತ್ತವೆ.
ಕೀರ್ತನೆಗಳು 42:6
ಓ ನನ್ನ ದೇವರೇ, ನನ್ನ ಪ್ರಾಣವು ನನ್ನಲ್ಲಿ ಕುಗ್ಗು ತ್ತದೆ; ಆದದರಿಂದ ಯೊರ್ದನ್ ಸೀಮೆಯಿಂದಲೂ ಹೆರ್ಮೋನ್ಯರಿಂದಲೂ ಮಿಸಾರ್ ಸಣ್ಣ ಬೆಟ್ಟದಿಂದಲೂ ನಿನ್ನನ್ನು ಜ್ಞಾಪಕಮಾಡಿಕೊಳ್ಳುತ್ತೇನೆ.
ಕೀರ್ತನೆಗಳು 55:4
ನನ್ನ ಹೃದಯವು ನನ್ನ ಅಂತ ರಂಗದಲ್ಲಿ ನೊಂದುಕೊಳ್ಳುತ್ತದೆ; ಮರಣದ ಬೆದರಿಕೆ ಗಳು ನನ್ನ ಮೇಲೆ ಬಿದ್ದವೆ.
ಕೀರ್ತನೆಗಳು 69:20
ನಿಂದೆಯು ನನ್ನ ಹೃದಯವನ್ನು ಮುರಿದದೆ; ಭಾರದಿಂದ ನಾನು ತುಂಬಿದವನಾಗಿದ್ದೇನೆ, ಕನಿಕರಕ್ಕೋಸ್ಕರ ಕೆಲವರನ್ನು ನಿರೀಕ್ಷಿಸಿದೆನು, ಆದರೆ ಒಬ್ಬರೂ ಕಾಣಲಿಲ್ಲ. ಆದರಿಸುವವರಿಗೋಸ್ಕರ ಸಹ ಎದುರು ನೋಡಿದೆನು: ಆದರೆ ಯಾರೂ ಸಿಕ್ಕಲಿಲ್ಲ.
1 ಸಮುವೇಲನು 1:7
ಹೀಗೆಯೇ ಅವನು ಪ್ರತಿಸಂವತ್ಸರದಲ್ಲಿಯೂ ಮಾಡಿದ್ದರಿಂದ ಇವಳು ಕರ್ತನ ಮನೆಗೆ ಹೋಗುತ್ತಿರುವಾಗ ಈ ಪ್ರಕಾರ ಹನ್ನಳನ್ನು ಬಾಧಿಸಿದ್ದರಿಂದ; ಅವಳು ಅತ್ತು ಊಟ ಮಾಡದೆ ಇದ್ದಳು.