ಕೀರ್ತನೆಗಳು 103:4
ನಿನ್ನ ಜೀವವನ್ನು ನಾಶದೊಳಗಿಂದ ವಿಮೋ ಚಿಸಿ ಪ್ರೀತಿ ಕೃಪೆಯನ್ನೂ ಅಂತಃಕರಣಗಳನ್ನೂ ನಿನಗೆ ಕಿರೀಟವಾಗಿ ಇಟ್ಟು
Who redeemeth | הַגּוֹאֵ֣ל | haggôʾēl | ha-ɡoh-ALE |
thy life | מִשַּׁ֣חַת | miššaḥat | mee-SHA-haht |
from destruction; | חַיָּ֑יְכִי | ḥayyāyĕkî | ha-YA-yeh-hee |
crowneth who | הַֽ֝מְעַטְּרֵ֗כִי | hamʿaṭṭĕrēkî | HAHM-ah-teh-RAY-hee |
thee with lovingkindness | חֶ֣סֶד | ḥesed | HEH-sed |
and tender mercies; | וְרַחֲמִֽים׃ | wĕraḥămîm | veh-ra-huh-MEEM |
Cross Reference
ಕೀರ್ತನೆಗಳು 103:12
ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ ನಮ್ಮ ದ್ರೋಹಗಳನ್ನು ನಮ್ಮಿಂದ ಅಷ್ಟು ದೂರ ಮಾಡಿದ್ದಾನೆ.
ಕೀರ್ತನೆಗಳು 71:23
ನಾನು ನಿನ್ನನ್ನು ಕೀರ್ತಿಸುವಾಗ ನನ್ನ ತುಟಿಗಳೂ ನೀನು ವಿಮೋಚಿಸಿದ ನನ್ನ ಪ್ರಾಣವೂ ಉತ್ಸಾಹ ಧ್ವನಿಗೈಯುವವು.
ಕೀರ್ತನೆಗಳು 56:13
ನನ್ನ ಪ್ರಾಣವನ್ನು ಮರಣದಿಂದ ಬಿಡಿಸಿದ್ದೀ, ಹಾಗೆ ನಾನು ಜೀವಿತರ ಬೆಳಕಿನಲ್ಲಿ ದೇವರ ಮುಂದೆ ನಡೆಯುವ ನನ್ನ ಪಾದಗಳನ್ನು ಬೀಳದಂತೆ ನೀನು ತಪ್ಪಿಸುವದಿಲ್ಲವೋ?
ಕೀರ್ತನೆಗಳು 34:22
ಕರ್ತನು ತನ್ನ ಸೇವಕರ ಪ್ರಾಣವನ್ನು ವಿಮೋಚಿಸುತ್ತಾನೆ; ಆತನಲ್ಲಿ ಭರವಸವಿಡುವವರು ಹಾಳಾಗುವದಿಲ್ಲ.
1 ಪೇತ್ರನು 5:4
ಪ್ರಧಾನ ಕುರುಬನು ಪ್ರತ್ಯಕ್ಷನಾಗುವಾಗ ನೀವು ಎಂದಿಗೂ ಬಾಡದ ಮಹಿಮೆಯುಳ್ಳ ಕಿರೀಟವನ್ನು ಹೊಂದುವಿರಿ.
ಕೀರ್ತನೆಗಳು 21:3
ಒಳ್ಳೇತನದ ಆಶೀರ್ವಾದಗಳೊಂದಿಗೆ ಅವನನ್ನು ಎದುರುಗೊಂಡು ಅಪರಂಜಿಯ ಕಿರೀಟವನ್ನು ಅವನ ತಲೆಗೆ ಇಡುತ್ತೀ.
ಕೀರ್ತನೆಗಳು 8:5
ಅವನನ್ನು ದೂತರಿಗಿಂತ ಸ್ವಲ್ಪಕಡಿಮೆ ಮಾಡಿ ಪ್ರಭಾವವನ್ನೂ ಘನವನ್ನೂ ಅವನಿಗೆ ಕಿರೀಟವಾಗಿ ಇಟ್ಟಿದ್ದೀ.
ಪ್ರಕಟನೆ 5:9
ಅವರು ಹೊಸ ಹಾಡನ್ನು ಹಾಡುತ್ತಾ--ನೀನು ಪುಸ್ತಕವನ್ನು ತೆಗೆದುಕೊಳ್ಳುವದಕ್ಕೂ ಅದರ ಮುದ್ರೆಗಳನ್ನು ಬಿಚ್ಚುವದಕ್ಕೂ ಯೋಗ್ಯ ನಾಗಿದ್ದೀ; ಯಾಕಂದರೆ ನೀನು ವಧಿತನಾಗಿ ನಿನ್ನ ರಕ್ತದಿಂದ ಸಕಲ ಕುಲ ಭಾಷೆ ಪ್ರಜೆ ಜನಾಂಗಗಳ ವರಿಂದ ನಮ್ಮನ್ನು ದೇವರಿಗಾಗಿ ವಿಮೋಚಿಸಿದ್ದೀ;
ಯಾಕೋಬನು 1:12
ಕಷ್ಟಗಳನ್ನು ಸಹಿಸಿಕೊಳ್ಳುವವನು ಧನ್ಯನು; ಅವನು ಪರಿಶೋಧಿತನಾದ ಮೇಲೆ ಕರ್ತನು ತನ್ನನ್ನು ಪ್ರೀತಿಸುವವರಿಗೆ ವಾಗ್ದಾನ ಮಾಡಿದ ಜೀವದ ಕಿರೀಟ ವನ್ನು ಹೊಂದುವನು;
ಕೀರ್ತನೆಗಳು 65:11
ವರುಷಕ್ಕೆ ನಿನ್ನ ಸುಭಿಕ್ಷಕಿರೀಟ ಇಡುತ್ತೀ; ನಿನ್ನ ಮಾರ್ಗಗಳಲ್ಲಿ ಸಮೃದ್ಧಿಯನ್ನು ಸುರಿಸುತ್ತೀ.
ಕೀರ್ತನೆಗಳು 5:12
ಕರ್ತನೇ, ನೀನು ನೀತಿವಂತನನ್ನು ಆಶೀರ್ವದಿಸುತ್ತೀ. ಖೇಡ್ಯದ ಹಾಗೆ ಅನುಗ್ರಹದಿಂದ ಅವನನ್ನು ಸುತ್ತಿಕೊಳ್ಳು
ಯೋಬನು 33:19
ಅವನು ತನ್ನ ಹಾಸಿಗೆಯಲ್ಲಿ ನೋವಿನಿಂದ ಶಿಕ್ಷಿಸ ಲ್ಪಡುತ್ತಾನೆ; ಅವನ ಎಲುಬುಗಳಿಗೆಲ್ಲಾ ಕಠಿಣವಾದ ನೋವು ಉಂಟು.
ಆದಿಕಾಂಡ 48:16
ಎಲ್ಲಾ ಕೇಡಿನಿಂದ ನನ್ನನ್ನು ತಪ್ಪಿಸಿದ ದೂತನು ಈ ಹುಡುಗರನ್ನು ಆಶೀರ್ವದಿಸಲಿ. ನನ್ನ ಹೆಸರಿನಿಂದ ನನ್ನ ತಂದೆಗಳಾದ ಅಬ್ರಹಾಮ್ ಇಸಾಕ್ ಅವರ ಹೆಸರಿನಿಂದ ಅವರು ಕರೆಯಲ್ಪಡಲಿ. ಅವರು ಭೂಮಧ್ಯದಲ್ಲಿ ಸಮೂಹವಾಗಿ ಹೆಚ್ಚಲಿ ಅಂದನು.