Index
Full Screen ?
 

ಕೀರ್ತನೆಗಳು 106:23

Psalm 106:23 in Tamil ಕನ್ನಡ ಬೈಬಲ್ ಕೀರ್ತನೆಗಳು ಕೀರ್ತನೆಗಳು 106

ಕೀರ್ತನೆಗಳು 106:23
ಆದದರಿಂದ ಆತನು ಅವರನ್ನು ನಾಶಮಾಡುತ್ತೇನೆಂದು ಹೇಳಿದನು. ಆದರೆ ಆತನು ಆದುಕೊಂಡ ಮೋಶೆಯು ಆತನ ಕೋಪ ವನ್ನು ತಿರುಗಿಸುವ ಹಾಗೆ ಆಪತ್ತಿನಲ್ಲಿ ಆತನ ಮುಂದೆ ನಿಂತುಕೊಂಡನು.

Therefore
he
said
וַיֹּ֗אמֶרwayyōʾmerva-YOH-mer
that
he
would
destroy
לְֽהַשְׁמִ֫ידָ֥םlĕhašmîdāmleh-hahsh-MEE-DAHM
not
had
them,
לוּלֵ֡יlûlêloo-LAY
Moses
מֹ֘שֶׁ֤הmōšeMOH-SHEH
his
chosen
בְחִיר֗וֹbĕḥîrôveh-hee-ROH
stood
עָמַ֣דʿāmadah-MAHD
before
בַּפֶּ֣רֶץbappereṣba-PEH-rets
him
in
the
breach,
לְפָנָ֑יוlĕpānāywleh-fa-NAV
to
turn
away
לְהָשִׁ֥יבlĕhāšîbleh-ha-SHEEV
wrath,
his
חֲ֝מָת֗וֹḥămātôHUH-ma-TOH
lest
he
should
destroy
מֵֽהַשְׁחִֽית׃mēhašḥîtMAY-hahsh-HEET

Cross Reference

ಯೆಹೆಜ್ಕೇಲನು 22:30
ಬೇಲಿ ಕಟ್ಟುವ ಮನುಷ್ಯನನ್ನು ದೇಶಕ್ಕೋಸ್ಕರ ನಾನು ಅದನು ನಾಶಮಾಡದ ಹಾಗೆ ಪೌಳಿಯ ಒಡಕಿನಲ್ಲಿ ನಿಲ್ಲತಕ್ಕ ವನನ್ನು ಹುಡುಕಿದೆನು, ಆದರೆ ಸಿಕ್ಕಲಿಲ್ಲ.

ಕೀರ್ತನೆಗಳು 105:6
ಆತನ ಸೇವಕನಾದ ಅಬ್ರಹಾಮನ ಸಂತತಿಯೇ, ಆತನು ಆದುಕೊಂಡ ಯಾಕೋಬನ ಮಕ್ಕಳೇ,

ಧರ್ಮೋಪದೇಶಕಾಂಡ 9:25
ಹೀಗಿರಲಾಗಿ ಕರ್ತನು ನಿಮ್ಮನ್ನು ನಾಶಮಾಡು ತ್ತೇನೆಂದು ಹೇಳಿದ್ದರಿಂದ ನಾನು ಮುಂಚೆ ಬಿದ್ದುಕೊಂಡ ಹಾಗೆ ನಾಲ್ವತ್ತು ಹಗಲು ನಾಲ್ವತ್ತು ರಾತ್ರಿ ಕರ್ತನ ಮುಂದೆ ಬಿದ್ದಿದ್ದೆನು.

ಯಾಕೋಬನು 5:16
ನೀವು ಸ್ವಸ್ಥವಾಗಬೇಕಾದರೆ ನಿಮ್ಮ ತಪ್ಪುಗಳನ್ನು ಒಬ್ಬರಿಗೊಬ್ಬರು ಅರಿಕೆಮಾಡಿ ಒಬ್ಬರಿ ಗೋಸ್ಕರ ಒಬ್ಬರು ಪ್ರಾರ್ಥಿಸಿರಿ; ನೀತಿವಂತನ ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯು ಬಹು ಫಲಕಾರಿಯಾಗುತ್ತದೆ.

ಯೋಹಾನನು 15:19
ನೀವು ಲೋಕದವರಾಗಿದ್ದರೆ ಲೋಕವು ತನ್ನವರನ್ನು ಪ್ರೀತಿಸುತ್ತಿತ್ತು; ಆದರೆ ನೀವು ಲೋಕದವರಲ್ಲದೆ ಇರುವದರಿಂದಲೂ ನಾನು ಲೋಕದೊಳಗಿಂದ ನಿಮ್ಮನ್ನು ಆರಿಸಿಕೊಂಡದ್ದರಿಂದಲೂ ಲೋಕವು ನಿಮ್ಮನ್ನು ದ್ವೇಷಮಾಡುತ್ತದೆ.

ಯೋಹಾನನು 15:16
ನೀವು ನನ್ನನ್ನು ಆರಿಸಿಕೊಂಡಿಲ್ಲ; ಆದರೆ ನಾನು ನಿಮ್ಮನ್ನು ಆರಿಸಿ ಕೊಂಡು, ನೀವು ಹೋಗಿ ಫಲಕೊಡುವಂತೆಯೂ ನಿಮ್ಮ ಫಲವು ನೆಲೆಗೊಂಡಿರುವಂತೆಯೂ ನಿಮ್ಮನ್ನು ನೇಮಿಸಿದ್ದೇನೆ. ಆದಕಾರಣ ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಏನು ಕೇಳಿಕೊಂಡರೂ ಆತನು ಅದನ್ನು ನಿಮಗೆ ಕೊಡುವನು.

ಮತ್ತಾಯನು 12:18
ಇಗೋ, ನಾನು ಆರಿಸಿಕೊಂಡ ನನ್ನ ಸೇವಕನು; ನನ್ನ ಪ್ರಾಣವು ಬಹಳವಾಗಿ ಮೆಚ್ಚಿಕೊಂಡಿರುವ ನನ್ನ ಪ್ರಿಯನು; ನಾನು ಆತನ ಮೇಲೆ ನನ್ನ ಆತ್ಮನನ್ನು ಇರಿಸುವೆನು ಮತ್ತು ಆತನು ಅನ್ಯಜನಗಳಿಗೆ ನ್ಯಾಯವನ್ನು ತೋರಿ ಸುವನು.

ಯೆಹೆಜ್ಕೇಲನು 20:13
ಆದರೆ ಇಸ್ರಾಯೇಲಿನ ಮನೆತನದವರು ಅರಣ್ಯದಲ್ಲಿಯೂ ನನಗೆ ವಿರುದ್ಧ ವಾಗಿ ತಿರುಗಿಬಿದ್ದರು; ಆಜ್ಞಾವಿಧಿಗಳನ್ನು ಅನುಸರಿಸುವ ಮನುಷ್ಯನು ಬದುಕುವನು. ಅವುಗಳಲ್ಲಿ ನಡೆಯದೆ ನನ್ನ ನ್ಯಾಯಗಳನ್ನು ಅಸಡ್ಡೆ ಮಾಡಿ ನನ್ನ ಸಬ್ಬತ್‌ ದಿನಗಳನ್ನು ಸಹ ಬಹಳವಾಗಿ ಅಪವಿತ್ರಪಡಿಸಿದರು; ಆಗ ನಾನು ಅವರ ಮೇಲೆ ನನ್ನ ರೋಷದಿಂದ ದಹಿಸಿಬಿಡುವೆನೆಂದು ಹೇಳಿದೆನು.

ಯೆಹೆಜ್ಕೇಲನು 20:8
ಆದರೆ ಅವರು ನನಗೆ ವಿರುದ್ಧವಾಗಿ ತಿರುಗಿಬಿದ್ದರು; ನನಗೆ ಕಿವಿಗೊಡಲಿಲ್ಲ. ಅವರು ತಮ್ಮ ತಮ್ಮ ಕಣ್ಣುಗಳಿಗೆ ಅಸಹ್ಯವಾದವುಗಳನ್ನು ಬಿಸಾಡಲಿಲ್ಲ; ಅವರು ಐಗುಪ್ತದ ವಿಗ್ರಹಗಳನ್ನು ಬಿಡಲಿಲ್ಲ; ಆಗ ನಾನು ಅವರ ಮೇಲೆ ನನ್ನ ರೋಷವನ್ನು ಸುರಿಸಿ, ಐಗುಪ್ತದೇಶದಲ್ಲಿ ಅವರ ಮೇಲೆ ನನ್ನ ಕೋಪವನ್ನು ತೀರಿಸುವೆನೆಂದು ಹೇಳಿದೆನು.

ಯೆಹೆಜ್ಕೇಲನು 13:5
ಕರ್ತನ ದಿನದಲ್ಲಿ ಯುದ್ಧಕ್ಕೆ ನಿಲ್ಲ ಬೇಕೆಂದು ಇಸ್ರಾಯೇಲ್‌ ಮನೆತನದವರಿಗಾಗಿ ಬೇಲಿ ಯನ್ನು ಕಟ್ಟಲಿಲ್ಲ, ನೀವು ಪೌಳಿಯ ಒಡಕುಗಳನ್ನೇರ ಲಿಲ್ಲ.

ಯೆರೆಮಿಯ 5:1
ಯೆರೂಸಲೇಮಿನ ಬೀದಿಗಳಲ್ಲಿ ಅತ್ತಿತ್ತ ಓಡಾಡಿ ನ್ಯಾಯವನ್ನು ಮಾಡುವವನೂ ಸತ್ಯವನ್ನು ಹುಡುಕುವವನೂ ನಿಮಗೆ ಒಬ್ಬನಾದರೂ ಸಿಕ್ಕುವನೋ? ಅವಳ ವಿಶಾಲ ಸ್ಥಳಗಳಲ್ಲಿ ನೋಡಿ ತಿಳಿದು ಹುಡುಕಿರಿ. ಸಿಕ್ಕಿದರೆ ಅವಳಿಗೆ ಮನ್ನಿಸುವೆನು.

ಕೀರ್ತನೆಗಳು 105:26
ತನ್ನ ಸೇವಕನಾದ ಮೋಶೆಯನ್ನೂ ತಾನು ಆದು ಕೊಂಡ ಆರೋನನನ್ನೂ ಕಳುಹಿಸಿದನು.

ಧರ್ಮೋಪದೇಶಕಾಂಡ 10:10
ಇದಲ್ಲದೆ ನಾನು ಮುಂಚಿನಂತೆ ನಾಲ್ವತ್ತು ಹಗಲು ನಾಲ್ವತ್ತು ರಾತ್ರಿ ಬೆಟ್ಟದಲ್ಲಿ ಇದ್ದೆನು. ಕರ್ತನು ಆ ಕಾಲದಲ್ಲಿ ಸಹ ನನ್ನ ಪ್ರಾರ್ಥನೆಯನ್ನು ಕೇಳಿ ನಿನ್ನನ್ನು ನಾಶಮಾಡುವದಕ್ಕೆ ಕರ್ತನು ಇಷ್ಟಪಡಲಿಲ್ಲ.

ಧರ್ಮೋಪದೇಶಕಾಂಡ 9:19
ಕರ್ತನು ನಿಮ್ಮನ್ನು ನಾಶಮಾಡುವ ಹಾಗೆ ನಿಮ್ಮ ಮೇಲೆ ಮಾಡುವ ಕೋಪ ರೌದ್ರಗಳಿಗೆ ಹೆದರಿದೆನು; ಆ ಕಾಲದಲ್ಲಿಯೂ ಕರ್ತನು ನನ್ನ ಪ್ರಾರ್ಥನೆ ಯನ್ನು ಕೇಳಿದನು.

ಧರ್ಮೋಪದೇಶಕಾಂಡ 9:13
ಇದಲ್ಲದೆ ಕರ್ತನು ನನಗೆ--ನಾನು ಈ ಜನವನ್ನು ನೋಡಿದ್ದೇನೆ; ಇಗೋ, ಇದು ಬಗ್ಗದ ಕುತ್ತಿಗೆಯುಳ್ಳ ಜನವೇ.

ಅರಣ್ಯಕಾಂಡ 16:5
ಕೋರಹನಿಗೂ ಅವನ ಸಮಸ್ತ ಸಮೂಹಕ್ಕೂ--ಕರ್ತನು ತನ್ನ ಹತ್ತಿರ ಬರ ಮಾಡಿಕೊಳ್ಳುವ ಹಾಗೆ ತಾನು ಆದುಕೊಂಡವನೂ ಪರಿಶುದ್ಧನೂ ಯಾರು ಎಂದು ನಾಳೆ ತೋರಿಸುವನು. ಆತನು ಯಾರನ್ನು ಆದುಕೊಳ್ಳುವನೋ ಅವರನ್ನು ಹತ್ತಿರ ಬರಮಾಡಿಕೊಳ್ಳುವನು. ನೀವು ಇದನ್ನು ಮಾಡಿರಿ:

ವಿಮೋಚನಕಾಂಡ 32:32
ಆದಾಗ್ಯೂ ಈಗ ನೀನು ಅವರ ಪಾಪವನ್ನು ಕ್ಷಮಿಸಬೇಕು. ಇಲ್ಲ ವಾದರೆ ನೀನು ಬರೆದ ನಿನ್ನ ಪುಸ್ತಕದಿಂದ ನನ್ನ ಹೆಸರನ್ನು ಅಳಿಸಿಬಿಡು ಎಂದು ಬೇಡಿಕೊಂಡನು.

ವಿಮೋಚನಕಾಂಡ 32:10
ಹೀಗಿರುವದರಿಂದ ನನ್ನ ಕೋಪವು ಅವರ ಮೇಲೆ ಉರಿದು ಅವರನ್ನು ದಹಿಸಿ ಬಿಡುವಂತೆ ನನ್ನನ್ನು ಬಿಡು. ತರುವಾಯ ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡುವೆನು ಅಂದನು.

Chords Index for Keyboard Guitar