ಕೀರ್ತನೆಗಳು 139:19
ಓ ದೇವರೇ, ನಿಶ್ಚಯವಾಗಿ ನೀನು ದುಷ್ಟನನ್ನು ಕೊಂದುಹಾಕುವಿ; ರಕ್ತ ಪ್ರಿಯರೇ, ನನ್ನಿಂದ ತೊಲ ಗಿರಿ.
Surely | אִם | ʾim | eem |
thou wilt slay | תִּקְטֹ֖ל | tiqṭōl | teek-TOLE |
the wicked, | אֱל֥וֹהַּ׀ | ʾĕlôah | ay-LOH-ah |
God: O | רָשָׁ֑ע | rāšāʿ | ra-SHA |
depart | וְאַנְשֵׁ֥י | wĕʾanšê | veh-an-SHAY |
from | דָ֝מִ֗ים | dāmîm | DA-MEEM |
me therefore, ye bloody | ס֣וּרוּ | sûrû | SOO-roo |
men. | מֶֽנִּי׃ | mennî | MEH-nee |
Cross Reference
ಯೆಶಾಯ 11:4
ಆದರೆ ಬಡವರಿಗೆ ನೀತಿಯಿಂದ ನ್ಯಾಯತೀರಿಸುವನು; ಭೂಮಿಯ ದೀನರಿಗೆ ನ್ಯಾಯ ವಾಗಿ ತೀರ್ಪುಮಾಡುವನು; ಭೂಮಿಯನ್ನು ತನ್ನ ಬಾಯಿಯ ಕೋಲಿನಿಂದ ಹೊಡೆಯುವನು, ತನ್ನ ತುಟಿಗಳ ಉಸಿರಿನಿಂದ ದುಷ್ಟರನ್ನು ಹತಮಾಡುವನು.
ಕೀರ್ತನೆಗಳು 119:115
ಕೇಡು ಮಾಡುವವರೇ, ನನ್ನಿಂದ ತೊಲಗಿರಿ; ನನ್ನ ದೇವರ ಆಜ್ಞೆಗಳನ್ನು ಕೈಕೊಳ್ಳುವೆನು.
ಕೀರ್ತನೆಗಳು 6:8
ಅಕ್ರಮ ಮಾಡುವವರೇ, ನನ್ನ ಬಳಿಯಿಂದ ತೊಲ ಗಿರಿ; ಅಳುವ ನನ್ನ ಸ್ವರವನ್ನು ಕರ್ತನು ಕೇಳಿದ್ದಾನೆ;
ಕೀರ್ತನೆಗಳು 5:6
ಸುಳ್ಳಾಡುವವರನ್ನು ನೀನು ನಾಶಮಾಡುತ್ತೀ; ಕೊಲೆಗಾರರನ್ನು ಮತ್ತು ಮೋಸಗಾರರನ್ನು ಕರ್ತನು ಅಸಹ್ಯಿಸುತ್ತಾನೆ.
ಕೀರ್ತನೆಗಳು 9:17
ದುಷ್ಟರೂ ದೇವರನ್ನು ಮರೆಯುವ ಎಲ್ಲಾ ಜನಾಂಗಗಳೂ ನರಕಕ್ಕೆ ಇಳಿಯುವರು.
2 ಕೊರಿಂಥದವರಿಗೆ 6:17
ಆದದರಿಂದ--ಅವರ ಮಧ್ಯದಲ್ಲಿಂದ ನೀವು ಹೊರಗೆ ಬಂದು ಪ್ರತ್ಯೇಕವಾಗಿರಿ. ಇದಲ್ಲದೆ ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು ಹೇಳುತ್ತಾನೆ.
ಮತ್ತಾಯನು 25:41
ಆತನು ಎಡಗಡೆ ಯಲ್ಲಿರುವವರಿಗೆ--ಶಾಪಗ್ರಸ್ತರೇ, ನೀವು ನನ್ನಿಂದ ತೊಲಗಿ ಸೈತಾನನಿಗೂ ಅವನ ದೂತರಿಗೂ ಸಿದ್ಧ ಮಾಡಲ್ಪಟ್ಟ ನಿತ್ಯ ಬೆಂಕಿಯೊಳಗೆ ಹೋಗಿರಿ.
ಮತ್ತಾಯನು 7:23
ಆಗ ನಾನು ಅವರಿಗೆ--ನಾನು ನಿಮ್ಮನ್ನು ಎಂದಿಗೂ ಅರಿಯೆನು; ದುಷ್ಟತನ ಮಾಡುವ ನೀವು ನನ್ನಿಂದ ತೊಲಗಿ ಹೋಗಿರಿ ಎಂದು ಹೇಳಿಬಿಡುವೆನು.
ಕೀರ್ತನೆಗಳು 94:23
ಅವರ ಅಪರಾಧವನ್ನು ಅವರ ಮೇಲೆ ತಿರಿಗಿ ಬರಮಾಡುವನು; ಅವರ ಕೇಡಿನಲ್ಲಿ ಅವರನ್ನು ಸಂಹರಿಸುವನು; ನಮ್ಮ ದೇವರಾದ ಕರ್ತನು ಅವರನ್ನು ಸಂಹರಿಸುವನು.
ಕೀರ್ತನೆಗಳು 64:7
ದೇವರು ಅವರ ಕಡೆಗೆ ಬಾಣವನ್ನು ಎಸೆಯು ವಾಗ ಫಕ್ಕನೆ ಅವರಿಗೆ ಗಾಯಗಳಾಗುವವು.
ಕೀರ್ತನೆಗಳು 55:23
ಓ ದೇವರೇ, ನೀನು ಅವರನ್ನು ನಾಶನದ ಕುಣಿಯಲ್ಲಿ ಇಳಿಯ ಮಾಡುವಿ. ಕೊಲೆಪಾತಕರೂ ಮೋಸಗಾರರೂ ತಮ್ಮ ಆಯುಷ್ಯದ ದಿವಸಗಳಲ್ಲಿ ಅರ್ದದಷ್ಟಾದರೂ ಜೀವಿ ಸುವದಿಲ್ಲ; ನಾನು ನಿನ್ನಲ್ಲಿ ಭರವಸವಿಡುತ್ತೇನೆ.