ಕೀರ್ತನೆಗಳು 141:4
ನನ್ನ ಹೃದಯವನ್ನು ಲಾಲಿಸದೆ ಮಾಡು; ಅವರ ಸವಿ ಊಟಗಳನ್ನು ನಾನು ಉಣ್ಣುವದಿಲ್ಲ.
Incline | אַל | ʾal | al |
not | תַּט | taṭ | taht |
my heart | לִבִּ֨י | libbî | lee-BEE |
evil any to | לְדָבָ֪ר׀ | lĕdābār | leh-da-VAHR |
thing, | רָ֡ע | rāʿ | ra |
to practise | לְהִתְע֘וֹלֵ֤ל | lĕhitʿôlēl | leh-heet-OH-LALE |
wicked | עֲלִל֨וֹת׀ | ʿălilôt | uh-lee-LOTE |
works | בְּרֶ֗שַׁע | bĕrešaʿ | beh-REH-sha |
with | אֶת | ʾet | et |
men | אִישִׁ֥ים | ʾîšîm | ee-SHEEM |
that work | פֹּֽעֲלֵי | pōʿălê | POH-uh-lay |
iniquity: | אָ֑וֶן | ʾāwen | AH-ven |
not me let and | וּבַל | ûbal | oo-VAHL |
eat | אֶ֝לְחַ֗ם | ʾelḥam | EL-HAHM |
of their dainties. | בְּמַנְעַמֵּיהֶֽם׃ | bĕmanʿammêhem | beh-mahn-ah-may-HEM |
Cross Reference
2 ಕೊರಿಂಥದವರಿಗೆ 6:17
ಆದದರಿಂದ--ಅವರ ಮಧ್ಯದಲ್ಲಿಂದ ನೀವು ಹೊರಗೆ ಬಂದು ಪ್ರತ್ಯೇಕವಾಗಿರಿ. ಇದಲ್ಲದೆ ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು ಹೇಳುತ್ತಾನೆ.
1 ಕೊರಿಂಥದವರಿಗೆ 15:33
ಮೋಸ ಹೋಗಬೇಡಿರಿ; ದುಸ್ಸಹವಾಸವು ಒಳ್ಳೇನಡವಳಿಕೆ ಯನ್ನು ಕೆಡಿಸುತ್ತದೆ.
ದಾನಿಯೇಲನು 1:5
ಅರಸನು ರಾಜ ಭೋಜನದಲ್ಲಿಯೂ ತಾನು ಕುಡಿಯುವ ದ್ರಾಕ್ಷಾರಸ ದಲ್ಲಿಯೂ ಪ್ರತಿದಿನವೂ ಅವರಿಗೆ ಪಾಲನ್ನು ನೇಮಿ ಸಿದನು; ಹೀಗೆ ಅವರು ಮೂರು ವರುಷಗಳ ಕಾಲ ಪೋಷಿಸಲ್ಪಟ್ಟ ಮೇಲೆ ಅರಸನ ಮುಂದೆ ನಿಲ್ಲತಕ್ಕವರಾಗುವರು.
ಯೆಶಾಯ 63:17
ಓ ಕರ್ತನೇ, ಏಕೆ ನಮ್ಮನ್ನು ನಿನ್ನ ಮಾರ್ಗಗ ಳಿಂದ ತಪ್ಪಿಹೋಗುವಂತೆ ಮಾಡಿದ್ದೀ. ಏಕೆ ನಮ್ಮ ಹೃದಯವನ್ನು ನಿನಗೆ ಭಯಪಡದ ಹಾಗೆ ಕಠಿಣ ಮಾಡಿದ್ದೀ. ನಿನ್ನ ಸೇವಕರಿಗೋಸ್ಕರವೂ ನಿನ್ನ ಬಾಧ್ಯತೆಯ ಗೋತ್ರಗಳಿಗೋಸ್ಕರವೂ ಹಿಂತಿರುಗು.
ಕೀರ್ತನೆಗಳು 119:36
ಲೋಭದ ಕಡೆಗಲ್ಲ, ನಿನ್ನ ಸಾಕ್ಷಿಗಳ ಕಡೆಗೆ ನನ್ನ ಹೃದಯವನ್ನು ತಿರುಗಿಸು.
1 ಅರಸುಗಳು 8:58
ನಮ್ಮ ದೇವರಾದ ಕರ್ತನು ನಮ್ಮನ್ನು ಕೈ ಬಿಡದೆ, ನಮ್ಮನ್ನು ವಿಸರ್ಜಿಸದೆ, ನಮ್ಮ ಪಿತೃಗಳ ಸಂಗಡ ಹೇಗೆ ಇದ್ದನೋ ಹಾಗೆಯೇ ನಮ್ಮ ಸಂಗಡ ಇರಲಿ.
ಪ್ರಕಟನೆ 18:4
ಪರಲೋಕದಿಂದ ಮತ್ತೊಂದು ಶಬ್ದವನ್ನು ನಾನು ಕೇಳಿದೆನು; ಅದು--ನನ್ನ ಜನರೇ, ಅವಳಿಂದ ಹೊರಗೆ ಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗ ಬಾರದು; ಅವಳಿಗಾಗುವ ಉಪದ್ರವಗಳಿಗೆ ಗುರಿ ಯಾಗಬಾರದು.
1 ಕೊರಿಂಥದವರಿಗೆ 10:31
ಆದದರಿಂದ ನೀವು ತಿಂದರೂ ಕುಡಿದರೂ ಏನು ಮಾಡಿದರೂ ಎಲ್ಲವನ್ನು ದೇವರ ಮಹಿಮೆಗಾಗಿ ಮಾಡಿರಿ.
ಮತ್ತಾಯನು 6:13
ನಮ್ಮನ್ನು ಶೋಧನೆಯೊಳಗೆ ನಡಿಸದೆ ಕೇಡಿನಿಂದ ತಪ್ಪಿಸು. ಯಾಕಂದರೆ ರಾಜ್ಯವೂ ಬಲವೂ ಮಹಿಮೆಯೂ ಎಂದೆಂದಿಗೂ ನಿನ್ನವೇ. ಆಮೆನ್.
ಯಾಕೋಬನು 1:13
ಯಾವನಾದರೂ ಶೋಧನೆಗೆ ಪ್ರೇರೇಪಿಸಲ್ಪಡುವಾಗ--ಈ ಪ್ರೇರಣೆಯು ನನಗೆ ದೇವರಿಂದ ಉಂಟಾಯಿತೆಂದು ಹೇಳಬಾರದು. ಯಾಕಂದರೆ ದೇವರು ಕೆಟ್ಟದ್ದರಿಂದ ಶೋಧಿಸಲಾರನು; ಆತನು ಯಾರನ್ನೂ ಶೋಧಿಸುವದೂ ಇಲ್ಲ.
ಧರ್ಮೋಪದೇಶಕಾಂಡ 29:4
ಆದಾಗ್ಯೂ ಕರ್ತನು ನಿಮಗೆ ಇಂದಿನ ವರೆಗೂ ತಿಳುಕೊಳ್ಳುವ ಹೃದಯ ವನ್ನೂ ನೋಡುವ ಕಣ್ಣುಗಳನ್ನೂ ಕೇಳುವ ಕಿವಿಗಳನ್ನೂ ಕೊಡಲಿಲ್ಲ.
ಧರ್ಮೋಪದೇಶಕಾಂಡ 2:30
ಆದರೆ ಹೆಷ್ಬೋನಿನ ಅರಸ ನಾದ ಸೀಹೋನನು ನಮ್ಮನ್ನು ತನ್ನ ಬಳಿಯಿಂದ ದಾಟಿಹೋಗಲು ಮನಸ್ಸು ಮಾಡಲಿಲ್ಲ; ಯಾಕಂದರೆ ಅವನನ್ನು ನಿನ್ನ ಕೈಯಲ್ಲಿ ಒಪ್ಪಿಸುವ ಹಾಗೆ ನಿನ್ನ ದೇವರಾದ ಕರ್ತನು ಅವನ ಬುದ್ಧಿಯನ್ನು ಮಂಕು ಮಾಡಿ ಹೃದಯವನ್ನು ಕಠಿಣಪಡಿಸಿದನೆಂದು ಈಗಾ ಗಲೇ ಪ್ರಸಿದ್ಧವಾಗಿದೆ.
ಅರಣ್ಯಕಾಂಡ 25:2
ಇವರು ಜನರನ್ನು ತಮ್ಮ ದೇವರುಗಳ ಬಲಿಗಳಿಗೆ ಕರೆದರು; ಜನರು ತಿಂದು ಅವರ ದೇವರು ಗಳಿಗೆ ಅಡ್ಡಬಿದ್ದರು.
1 ಕೊರಿಂಥದವರಿಗೆ 10:27
ನಂಬದವರಲ್ಲಿ ಯಾವನಾದರೂ ನಿಮ್ಮನ್ನು ಊಟಕ್ಕೆ ಕರೆಯುವಾಗ ಹೋಗುವದಕ್ಕೆ ನಿಮಗಿಷ್ಟವಿದ್ದರೆ ನಿಮ ಗೇನು ಬಡಿಸಿದರೂ ಅದನ್ನು ಮನಸ್ಸಾಕ್ಷಿಯ ನಿಮಿತ್ತ ಯಾವ ಪ್ರಶ್ನೆಯನ್ನೂ ಕೇಳದೆ ತಿನ್ನಿರಿ.
ಅಪೊಸ್ತಲರ ಕೃತ್ಯಗ 10:13
ಆಗ--ಪೇತ್ರನೇ, ಎದ್ದು ಕೊಯ್ದು ತಿನ್ನು ಎಂದು ಹೇಳುವ ಒಂದು ಧ್ವನಿಯು ಅವನಿಗೆ ಕೇಳಿಸಿತು.
ಙ್ಞಾನೋಕ್ತಿಗಳು 23:6
ಕೆಟ್ಟದೃಷ್ಟಿ ಯುಳ್ಳವನ ರೊಟ್ಟಿಯನ್ನು ತಿನ್ನಬೇಡ; ಇಲ್ಲವೆ ಅವನ ರುಚಿ ಪದಾರ್ಥಗಳನ್ನು ಆಶಿಸಬೇಡ;
ಙ್ಞಾನೋಕ್ತಿಗಳು 23:1
ಆಳುವವನ ಸಂಗಡ ನೀನು ಊಟಕ್ಕೆ ಕೂತಿರುವಾಗ ನಿನ್ನ ಎದುರಿನಲ್ಲಿ ಯಾವದು ಇದೆ ಎಂದು ಶ್ರದ್ಧೆಯಿಂದ ಆಲೋಚಿಸು;
1 ಅರಸುಗಳು 22:22
ಆಗ ಕರ್ತನು ಅದಕ್ಕೆ--ಯಾವದರಿಂದ ಅಂದನು. ಅದಕ್ಕದು-- ನಾನು ಹೊರಟು ಅವನ ಎಲ್ಲಾ ಪ್ರವಾದಿಗಳ ಬಾಯಿಯಲ್ಲಿ ಸುಳ್ಳಾದ ಆತ್ಮನಾಗಿ ರುವೆನು ಅಂದಿತು.