Base Word
κεφαλή
Short Definitionthe head (as the part most readily taken hold of), literally or figuratively
Long Definitionthe head, both of men and often of animals
Derivationfrom the primary κάπτω (in the sense of seizing)
Same as
International Phonetic Alphabetkɛ.fɑˈle
IPA modce̞.fɑˈle̞
Syllablekephalē
Dictionkeh-fa-LAY
Diction Modkay-fa-LAY
Usagehead

ಮತ್ತಾಯನು 5:36
ನಿನ್ನ ತಲೆಯ ಮೇಲೆ ಕೂಡ ಆಣೆ ಇಡಬೇಡ; ಯಾಕಂದರೆ ನೀನು ಒಂದು ಕೂದಲನ್ನಾದರೂ ಬಿಳಿ ಅಥವಾ ಕಪ್ಪು ಮಾಡಲಾರಿ.

ಮತ್ತಾಯನು 6:17
ಆದರೆ ನೀನು ಉಪವಾಸ ಮಾಡುವಾಗ ನಿನ್ನ ತಲೆಗೆ ಎಣ್ಣೆ ಹಚ್ಚಿಕೊಂಡು ನಿನ್ನ ಮುಖವನ್ನು ತೊಳೆದುಕೋ.

ಮತ್ತಾಯನು 8:20
ಅದಕ್ಕೆ ಯೇಸು ಅವನಿಗೆ--ನರಿಗಳಿಗೆ ಗುದ್ದುಗಳಿವೆ, ಆಕಾಶದ ಪಕ್ಷಿಗಳಿಗೆ ಗೂಡು ಗಳಿವೆ; ಆದರೆ ಮನುಷ್ಯಕುಮಾರನಿಗೆ ತನ್ನ ತಲೆಯಿಡು ವದಕ್ಕೂ ಸ್ಥಳವಿಲ್ಲ ಎಂದು ಹೇಳಿದನು.

ಮತ್ತಾಯನು 10:30
ಆದರೆ ನಿಮ್ಮ ತಲೆಯ ಕೂದಲುಗಳೆಲ್ಲಾ ಲೆಕ್ಕಿಸಲ್ಪಟ್ಟಿವೆ.

ಮತ್ತಾಯನು 14:8
ಅವಳು ತನ್ನ ತಾಯಿಯಿಂದ ಮೊದಲೇ ಕಲಿಸಲ್ಪಟ್ಟವಳಾಗಿ-- ಬಾಪ್ತಿಸ್ಮ ಮಾಡಿಸುವ ಯೋಹಾನನ ತಲೆಯನ್ನು ಪರಾ ತಿನಲ್ಲಿ ಇಲ್ಲಿಯೇ ನನಗೆ ಕೊಡು ಎಂದು ಹೇಳಿದಳು.

ಮತ್ತಾಯನು 14:11
ಇದಲ್ಲದೆ ಅವನ ತಲೆಯನ್ನು ಪರಾತಿನಲ್ಲಿ ತಂದು ಆ ಹುಡುಗಿಗೆ ಕೊಟ್ಟರು. ಅವಳು ಅದನ್ನು ತನ್ನ ತಾಯಿಯ ಬಳಿಗೆ ತಂದಳು.

ಮತ್ತಾಯನು 21:42
ಯೇಸು ಅವರಿಗೆ--ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು; ಮತ್ತು ಇದು ಕರ್ತನಿಂದಲೇ ಆಯಿತು. ಅದು ನಮ್ಮ ದೃಷ್ಟಿಯಲ್ಲಿ ಆಶ್ಚರ್ಯವಾದದ್ದು ಎಂದು ಬರಹಗಳಲ್ಲಿ ಎಂದಾದರೂ ನೀವು ಓದಲಿಲ್ಲವೋ?

ಮತ್ತಾಯನು 26:7
ಆತನು ಅಲ್ಲಿ ಊಟಕ್ಕೆ ಕೂತಿದ್ದಾಗ ಒಬ್ಬ ಸ್ತ್ರೀಯು ಅತಿಶ್ರೇಷ್ಠವಾದ ತೈಲದ ಭರಣಿಯೊಂದಿಗೆ ಆತನ ಬಳಿಗೆ ಬಂದು ಅದನ್ನು ಆತನ ತಲೆಯ ಮೇಲೆ ಹೊಯಿದಳು.

ಮತ್ತಾಯನು 27:29
ತರುವಾಯ ಅವರು ಒಂದು ಮುಳ್ಳಿನ ಕಿರೀಟವನ್ನು ಹೆಣೆದು ಅದನ್ನು ಆತನ ತಲೆಯ ಮೇಲಿಟ್ಟು ಬಲಗೈಯಲ್ಲಿ ಒಂದು ಬೆತ್ತವನ್ನು ಕೊಟ್ಟು ಆತನ ಮುಂದೆ ಮೊಣಕಾಲೂರಿ--ಯೆಹೂದ್ಯರ ಅರಸನೇ, ವಂದನೆ ಎಂದು ಹೇಳಿ ಆತನನ್ನು ಹಾಸ್ಯಮಾಡಿದರು.

ಮತ್ತಾಯನು 27:30
ಅವರು ಆತನ ಮೇಲೆ ಉಗುಳಿ ಆ ಬೆತ್ತವನ್ನು ತಕ್ಕೊಂಡು ಆತನ ತಲೆಯ ಮೇಲೆ ಹೊಡೆದರು.

Occurences : 76

எபிரேய எழுத்துக்கள் Hebrew Letters in Tamilஎபிரேய உயிரெழுத்துக்கள் Hebrew Vowels in TamilHebrew Short Vowels in Tamil எபிரேய குறில் உயிரெழுத்துக்கள்Hebrew Long Vowels in Tamil எபிரேய நெடில் உயிரெழுத்துக்கள்