Base Word
דָּקַק
Short Definitionto crush (or intransitively) crumble
Long Definitionto crush, pulverise, thresh
Derivationa primitive root (compare H1915)
International Phonetic Alphabetd̪ɔːˈk’ɑk’
IPA moddɑːˈkɑk
Syllabledāqaq
Dictiondaw-KAHK
Diction Modda-KAHK
Usagebeat in pieces (small), bruise, make dust, (into) × powder, (be, very) small, stamp (small)
Part of speechv

ವಿಮೋಚನಕಾಂಡ 30:36
ಅದರಲ್ಲಿ ಸ್ವಲ್ಪ ಪುಡಿಮಾಡಿ ಸಭೆಯ ಗುಡಾರ ದಲ್ಲಿ ನಾನು ನಿನ್ನನ್ನು ಸಂಧಿಸುವ ಸ್ಥಳದಲ್ಲಿ ಸಾಕ್ಷಿ ಹಲಗೆಗಳ ಮುಂದೆ ಇಡು. ಅದು ನಿಮಗೆ ಅತಿಪರಿಶುದ್ಧ ವಾಗಿರಲಿ.

ವಿಮೋಚನಕಾಂಡ 32:20
ಅವರು ಮಾಡಿದ ಕರುವನ್ನು ಅವನು ತೆಗೆದುಕೊಂಡು ಅದನ್ನು ಬೆಂಕಿಯಲ್ಲಿ ಸುಟ್ಟು ಪುಡಿಯಾಗುವ ವರೆಗೆ ಅರೆಸಿ ನೀರಿನ ಮೇಲೆ ಚೆಲ್ಲಿ ಆ ನೀರನ್ನು ಇಸ್ರಾಯೇಲ್‌ ಮಕ್ಕಳು ಕುಡಿಯುವಂತೆ ಮಾಡಿದನು.

ಧರ್ಮೋಪದೇಶಕಾಂಡ 9:21
ಇದಲ್ಲದೆ ನೀವು ಮಾಡಿದ ಪಾಪವಾಗಿರುವ ಆ ಕರುವನ್ನು ತಕ್ಕೊಂಡು ಬೆಂಕಿಯಲ್ಲಿ ಸುಟ್ಟು ತುಳಿದು ಅದು ಧೂಳಿ ನಂತೆ ಪುಡಿಯಾಗುವ ವರೆಗೆ ಚೆನ್ನಾಗಿ ಅರೆದು ಅದರ ಧೂಳನ್ನು ಬೆಟ್ಟದಿಂದ ಹರಿಯುವ ಹಳ್ಳದಲ್ಲಿ ನಾನು ಹಾಕಿದೆನು.

2 ಸಮುವೇಲನು 22:43
ಆಗ ನಾನು ಅವರನ್ನು ನೆಲದ ಧೂಳಿನ ಹಾಗೆ ಪುಡಿಪುಡಿಮಾಡಿದೆನು; ಬೀದಿಯ ಕೆಸರಿನ ಹಾಗೆ ಅವರನ್ನು ತುಳಿದು ಚದರುವಂತೆ ಮಾಡಿದೆನು.

2 ಅರಸುಗಳು 23:6
ಕರ್ತನ ಆಲಯದೊ ಳಗಿಂದ ವಿಗ್ರಹದ ತೋಪನ್ನು ಯೆರೂಸಲೇಮಿನ ಹೊರಗೆ ಕಿದ್ರೋನ್‌ ಹಳ್ಳಕ್ಕೆ ಅದನ್ನು ತರಿಸಿ ಅವನು ಕಿದ್ರೋನ್‌ ಹಳ್ಳದ ಬಳಿಯಲ್ಲಿ ಸುಟ್ಟು ಧೂಳಾಗಿ ಪುಡಿಮಾಡಿ ಆ ಧೂಳಿನ ಪುಡಿಯನ್ನು ಜನರ ಸಮಾಧಿ ಗಳ ಮೇಲೆ ಹಾಕಿಸಿದನು.

2 ಅರಸುಗಳು 23:15
ಇದಲ್ಲದೆ ಬೇತೇಲಿನಲ್ಲಿದ್ದ ಬಲಿಪೀಠವನ್ನೂ ಇಸ್ರಾಯೇಲ್ಯರು ಪಾಪಮಾಡಲು ಪ್ರೇರೇಪಿಸಿದ ನೆಬಾ ಟನ ಮಗನಾದ ಯಾರೊಬ್ಬಾಮನು ಮಾಡಿದ ಉನ್ನತ ಸ್ಥಳವನ್ನೂ ಅವನು ಕೆಡವಿಹಾಕಿ ಸುಟ್ಟ್ಟು ಅದನ್ನು ಧೂಳಾ ಗಲು ಪುಡಿಮಾಡಿ ವಿಗ್ರಹದ ತೋಪನ್ನು ಸುಡಿಸಿದನು.

2 ಪೂರ್ವಕಾಲವೃತ್ತಾ 15:16
ಇದಲ್ಲದೆ ಅರಸನಾಗಿರುವ ಆಸನ ತಾಯಿಯಾದ ಮಾಕಳನ್ನು ಕುರಿತು ಏನಂದರೆ, ಅವಳು ಒಂದು ವಿಗ್ರಹವನ್ನು ಮಾಡಿಸಿ ತೋಪಿನಲ್ಲಿ ಇರಿಸಿದ್ದರಿಂದ ಅವಳನ್ನು ರಾಣಿಯಾಗಿರದ ಹಾಗೆ ತೆಗೆದುಹಾಕಿದನು. ಇದಲ್ಲದೆ ಆಸನು ಅವಳ ವಿಗ್ರಹವನ್ನು ಕಡಿದುಹಾಕಿ ಅದನ್ನು ತುಳಿದು ಕಿದ್ರೋನ್‌ ಹಳ್ಳದ ಬಳಿಯಲ್ಲಿ ಅದನ್ನು ಸುಟ್ಟುಬಿಟ್ಟನು.

2 ಪೂರ್ವಕಾಲವೃತ್ತಾ 34:4
ಅವರು ಬಾಳನ ಬಲಿಪೀಠಗಳನ್ನು ಅವನ ಸಮ್ಮುಖದಿಂದ ಕೆಡವಿಹಾಕಿದರು. ಅವುಗಳ ಮೇಲಿರುವ ಸೂರ್ಯಸ್ತಂಭಗಳನ್ನು ಕಡಿದುಹಾಕಿ ತೋಪುಗಳನ್ನೂ ಕೆತ್ತಿದ ವಿಗ್ರಹಗಳನ್ನೂ ಎರಕ ಹೊಯ್ದ ವಿಗ್ರಹಗಳನ್ನೂ ಒಡೆದುಬಿಟ್ಟು ಪುಡಿಪುಡಿ ಮಾಡಿ, ಅವುಗಳಿಗೆ ಬಲಿ ಅರ್ಪಿಸಿದವರ ಸಮಾಧಿ ಗಳ ಮೇಲೆ ಚೆಲ್ಲಿಸಿ

2 ಪೂರ್ವಕಾಲವೃತ್ತಾ 34:7
ಅವನು ಬಲಿಪೀಠಗಳನ್ನೂ ತೋಪುಗಳನ್ನೂ ಕೆಡವಿ ಹಾಕಿ ಕೆತ್ತಿದ ವಿಗ್ರಹಗಳನ್ನು ಕುಟ್ಟಿ ಪುಡಿಪುಡಿ ಮಾಡಿ ಇಸ್ರಾಯೇಲ್‌ ದೇಶದಲ್ಲೆಲ್ಲಿಯೂ ಇರುವ ಸಮಸ್ತ ವಿಗ್ರಹಗಳನ್ನು ಕೆಡಿಸಿದ ತರುವಾಯ ಯೆರೂಸಲೇಮಿಗೆ ಹಿಂತಿರುಗಿದನು.

ಯೆಶಾಯ 28:28
ರೊಟ್ಟಿಯ ಕಾಳನ್ನು ಕುಟ್ಟುವನೋ? ಅವನು ಯಾವಾಗಲೂ ಅದನ್ನು ಒಕ್ಕುವದಿಲ್ಲ; ಇಲ್ಲವೇ ಅವನ ಬಂಡಿಯ ಚಕ್ರದಿಂದ ಅದರ ಮೇಲೆ ಒಡೆಯುವದಿಲ್ಲ, ಅಥವಾ ಅವನ ಕುದುರೆ ಸವಾರರಿಂದ ಕುಣಿಸುವದಿಲ್ಲ.

Occurences : 13

எபிரேய எழுத்துக்கள் Hebrew Letters in Tamilஎபிரேய உயிரெழுத்துக்கள் Hebrew Vowels in TamilHebrew Short Vowels in Tamil எபிரேய குறில் உயிரெழுத்துக்கள்Hebrew Long Vowels in Tamil எபிரேய நெடில் உயிரெழுத்துக்கள்