Index
Full Screen ?
 

Psalm 6:6 in Kannada

சங்கீதம் 6:6 Kannada Bible Psalm Psalm 6

Psalm 6:6
ನಾನು ನರನರಳಿ ದಣಿದಿದ್ದೇನೆ; ಪ್ರತಿ ರಾತ್ರಿಯೂ ನನ್ನ ಕಣ್ಣೀರಿನಿಂದ ಮಂಚವು ತೇಲಾ ಡುತ್ತದೆ. ಹಾಸಿಗೆಯು ಕಣ್ಣೀರಿನಿಂದ ನೆನೆದು ಹೋಗುತ್ತದೆ.

I
am
weary
יָגַ֤עְתִּי׀yāgaʿtîya-ɡA-tee
groaning;
my
with
בְּֽאַנְחָתִ֗יbĕʾanḥātîbeh-an-ha-TEE
all
אַשְׂחֶ֣הʾaśḥeas-HEH
the
night
בְכָלbĕkālveh-HAHL
bed
my
I
make
לַ֭יְלָהlaylâLA-la
to
swim;
מִטָּתִ֑יmiṭṭātîmee-ta-TEE
water
I
בְּ֝דִמְעָתִ֗יbĕdimʿātîBEH-deem-ah-TEE
my
couch
עַרְשִׂ֥יʿarśîar-SEE
with
my
tears.
אַמְסֶֽה׃ʾamseam-SEH

Cross Reference

Psalm 69:3
ನಾನು ಕೂಗಿ ದಣಿದಿದ್ದೇನೆ; ನನ್ನ ಗಂಟಲು ಒಣಗಿದೆ; ನಾನು ದೇವ ರನ್ನು ಎದುರು ನೋಡುವದರಿಂದ ನನ್ನ ಕಣ್ಣುಗಳು ಕ್ಷೀಣಿಸುತ್ತವೆ.

Psalm 42:3
ನಿನ್ನ ದೇವರು ಎಲ್ಲಿ ಎಂದು ಅವರು ದಿನವೆಲ್ಲಾ ನನಗೆ ಹೇಳುವ ದರಿಂದ ನನ್ನ ಕಣ್ಣೀರು ನನಗೆ ಹಗಲಿರುಳು ಆಹಾರ ವಾಗಿದೆ.

Psalm 38:9
ಕರ್ತನೇ, ನನ್ನ ಆಶೆಯೆಲ್ಲಾ ನಿನ್ನ ಮುಂದೆ ಇದೆ; ನನ್ನ ನಿಟ್ಟುಸಿರು ನಿನಗೆ ಮರೆಯಾದದ್ದಲ್ಲ.

Luke 7:38
ಆತನ ಹಿಂದೆ ಪಾದಗಳ ಬಳಿಯಲ್ಲಿ ನಿಂತು ಅಳುತ್ತಾ ಆತನ ಪಾದ ಗಳನ್ನು ಕಣ್ಣೀರಿನಿಂದ ತೊಳೆಯಲಾರಂಭಿಸಿ ಅವುಗಳನ್ನು ತನ್ನ ತಲೇಕೂದಲಿನಿಂದ ಒರಸಿ ಆತನ ಪಾದಗಳಿಗೆ ಮುದ್ದಿಟ್ಟು ಆ ತೈಲವನ್ನು ಹಚ್ಚಿದಳು.

Lamentations 3:48
ನನ್ನ ಜನರ ಕುಮಾರಿಯ ನಾಶನದ ನಿಮಿತ್ತವಾಗಿ ನನ್ನ ಕಣ್ಣಿನಿಂದ ನೀರು ನದಿಯಾಗಿ ಹರಿದುಹೋಗುತ್ತದೆ.

Lamentations 2:18
ಅವರ ಹೃದಯವು ಕರ್ತನ ಕಡೆಗೆ ಕೂಗಿ--ಓ ಚೀಯೋನಿನ ಮಗಳ ಗೋಡೆಯೇ, ರಾತ್ರಿ ಹಗಲೂ ನಿನ್ನ ಕಣ್ಣೀರು ನದಿಯಂತೆ ಹರಿದು ಹೋಗಲಿ, ನೀನು ವಿಶ್ರಾಂತಿ ತಕ್ಕೊಳ್ಳಬೇಡ; ನಿನ್ನ ಕಣ್ಣು ರೆಪ್ಪೆಯನ್ನು ಮುಚ್ಚಬೇಡ.

Lamentations 2:11
ನನ್ನ ಕಣ್ಣುಗಳು ಕಣ್ಣೀರನ್ನು ಸುರಿಸುತ್ತಲೇ ಇವೆ. ನನ್ನ ಕರುಳುಗಳು ಕುದಿಯುತ್ತವೆ, ನನ್ನ ಪಿತ್ತಕೋಶವು ನೆಲದ ಮೇಲೆ ಸುರಿಯಲ್ಪಟ್ಟಿದೆ, ಯಾಕಂದರೆ ನನ್ನ ಜನರ ಮಗಳು ನಾಶವಾಗಿದ್ದಾಳೆ. ಮಕ್ಕಳೂ ಮೊಲೆಕೂಸುಗಳೂ ನಗರದ ಬೀದಿಗಳಲ್ಲಿ ಮೂರ್ಛೆ ಹೋಗಿದ್ದಾರೆ.

Lamentations 1:16
ಇವುಗಳ ನಿಮಿತ್ತ ನಾನು ಅಳುತ್ತೇನೆ; ಕಣ್ಣೀರು ಧಾರೆಧಾರೆಯಾಗಿ ಸುರಿಯುವದು, ನನ್ನನ್ನು ಆದರಿಸುವಾತನೂ ನನ್ನ ಪ್ರಾಣವನ್ನು ಬದುಕಿಸುವ ಆದರಿಕನೂ ನನ್ನಿಂದ ದೂರವಾಗಿದ್ದಾನೆ; ನನ್ನ ಮಕ್ಕಳು ಹಾಳಾಗಿದ್ದಾರೆ, ನನ್ನ ಶತ್ರುವು ಗೆದ್ದಿದ್ದಾನೆ.

Lamentations 1:2
ಅವಳು ರಾತ್ರಿಯಲ್ಲಿ ಯಾತನೆಗೊಂಡು ಅಳುತ್ತಾಳೆ. ಆಕೆಯ ಕಣ್ಣೀರು ಕೆನ್ನೆಗಳ ಮೇಲಿದೆ; ಎಲ್ಲಾ ಪ್ರಿಯರಲ್ಲಿ ಆಕೆಯನ್ನು ಆದರಿಸುವವನು ಒಬ್ಬನೂ ಇಲ್ಲ. ಆಕೆಯ ಸ್ನೇಹಿತರೆಲ್ಲರೂ ವಂಚನೆಮಾಡಿ ಶತ್ರುಗಳಾದರು.

Jeremiah 14:17
ಆದದರಿಂದ ನೀನು ಈ ಮಾತನ್ನು ಅವರಿಗೆ ಹೇಳಬೇಕು--ನನ್ನ ಕಣ್ಣುಗಳು ರಾತ್ರಿ ಹಗಲು ಬಿಡದೆ ಕಣ್ಣೀರು ಸುರಿಸಲಿ; ಯಾಕಂದರೆ ನನ್ನ ಜನರ ಮಗಳಾದ ಕನ್ಯೆಯು ಕ್ರೂರವಾದ ದೊಡ್ಡ ಏಟಿನಿಂದಲೂ ಪೆಟ್ಟಿನಿಂದಲೂ ಮುರಿಯಲ್ಪಟ್ಟಳು.

Psalm 143:4
ನನ್ನ ಆತ್ಮವು ನನ್ನಲ್ಲಿ ಕುಂದಿಹೋಗಿದೆ; ನನ್ನೊಳಗೆ ನನ್ನ ಹೃದಯವು ಹಾಳಾಗಿದೆ.

Psalm 102:3
ನನ್ನ ದಿವಸಗಳು ಹೊಗೆಯಂತೆ ಕಳೆದುಹೋಗು ತ್ತವೆ; ನನ್ನ ಎಲುಬುಗಳು ಕೊಳ್ಳಿಯ ಹಾಗೆ ಸುಟ್ಟು ಹೋಗಿವೆ.

Psalm 88:9
ಬಾಧೆಯ ದೆಸೆಯಿಂದ ನನ್ನ ಕಣ್ಣು ದುಃಖಿಸುತ್ತದೆ. ಕರ್ತನೇ, ದಿನವೆಲ್ಲಾ ನಿನ್ನನ್ನು ಕರೆಯು ತ್ತೇನೆ; ನಾನು ನಿನ್ನ ಕಡೆಗೆ ನನ್ನ ಕೈಗಳನ್ನು ಚಾಚುತ್ತೇನೆ.

Psalm 77:2
ನನ್ನ ಇಕ್ಕ ಟ್ಟಿನ ದಿವಸದಲ್ಲಿ ಕರ್ತನನ್ನು ಹುಡುಕಿದೆನು; ನಾನು ರಾತ್ರಿಯೆಲ್ಲಾ ವ್ಯಥೆಪಟ್ಟದ್ದರಿಂದ ನನ್ನ ಪ್ರಾಣವು ಆದರಣೆ ಹೊಂದಲೊಲ್ಲದು.

Psalm 39:12
ಓ ಕರ್ತನೇ, ನನ್ನ ಪ್ರಾರ್ಥನೆಯನ್ನು ಕೇಳು; ನನ್ನ ಮೊರೆಗೆ ಕಿವಿಗೊಡು; ನನ್ನ ಕಣ್ಣೀರಿಗೆ ಮೌನ ವಾಗಿರಬೇಡ. ನಾನು ನಿನ್ನ ಸಂಗಡ ಪರದೇಶಸ್ಥನು; ನನ್ನ ತಂದೆಗಳೆಲ್ಲರ ಹಾಗೆ ಪ್ರವಾಸಿಯಾಗಿದ್ದೇನೆ.

Job 23:2
ಈಹೊತ್ತೇ ನನ್ನ ದೂರು ಕಹಿಯಾಗಿದೆ; ನನ್ನ ಏಟು ನನ್ನ ನಿಟ್ಟುಸುರಿಗಿಂತ ಭಾರವಾಗಿದೆ.

Job 16:20
ನನ್ನ ಸ್ನೇಹಿತರೇ ನನ್ನನ್ನು ಹಾಸ್ಯಮಾಡುತ್ತಾರೆ; ದೇವರಿಗೆ ನನ್ನ ಕಣ್ಣೀರನ್ನು ಸುರಿಸುತ್ತೇನೆ.

Job 10:1
ನನ್ನ ಪ್ರಾಣವು ನನ್ನ ಜೀವನಕ್ಕಾಗಿ ಬೇಸರಗೊಂಡಿದೆ. ನನ್ನ ದೂರುಗಳನ್ನು ನನ್ನ ಮೇಲೆಯೇ ಬಿಡುವೆನು; ನನ್ನ ಮನೋವ್ಯಥೆ ಯಿಂದ ಮಾತನಾಡುವೆನು.

Job 7:3
ನಾನು ಸಹ ವ್ಯರ್ಥವಾದ ತಿಂಗಳುಗಳನ್ನು ಬಾಧ್ಯವಾಗಿ ತಕ್ಕೊಳ್ಳಬೇಕಾಯಿತು; ಬೇಸರಿಕೆಯ ರಾತ್ರಿ ಗಳು ನನಗೆ ನೇಮಿಸಲ್ಪಟ್ಟವು.

Chords Index for Keyboard Guitar