Psalm 62:6
ಆತನೇ ನನ್ನ ಬಂಡೆಯೂ ರಕ್ಷಣೆಯೂ ದುರ್ಗವೂ ಆಗಿದ್ದಾನೆ. ನಾನು ಕದಲೆನು.
He | אַךְ | ʾak | ak |
only | ה֣וּא | hûʾ | hoo |
is my rock | צ֭וּרִי | ṣûrî | TSOO-ree |
salvation: my and | וִֽישׁוּעָתִ֑י | wîšûʿātî | vee-shoo-ah-TEE |
defence; my is he | מִ֝שְׂגַּבִּ֗י | miśgabbî | MEES-ɡa-BEE |
I shall not | לֹ֣א | lōʾ | loh |
be moved. | אֶמּֽוֹט׃ | ʾemmôṭ | eh-mote |
Cross Reference
Psalm 62:2
ಆತನೇ ನನ್ನ ಬಂಡೆಯೂ ರಕ್ಷಣೆಯೂ ದುರ್ಗವೂ ಆಗಿದ್ದಾನೆ; ನಾನು ಕದಲುವದೇ ಇಲ್ಲ.
Psalm 16:8
ನಾನು ಕರ್ತನನ್ನು ಯಾವಾಗಲೂ ನನ್ನ ಮುಂದೆ ಇಟ್ಟುಕೊಂಡಿದ್ದೇನೆ. ಆತನು ನನ್ನ ಬಲಗಡೆಯಲ್ಲಿ ಇರುವದರಿಂದ ನಾನು ಕದಲೆನು.
Psalm 112:6
ನಿಶ್ಚಯವಾಗಿ ಅವನು ಎಂದೆಂದಿಗೂ ಕದಲನು; ನೀತಿವಂತನು ನಿತ್ಯವಾಗಿ ಜ್ಞಾಪಕದಲ್ಲಿ ಇರುವನು.
Psalm 18:31
ಕರ್ತನಲ್ಲದೆ ದೇವರು ಯಾರು? ಇಲ್ಲವೆ ನಮ್ಮ ದೇವರ ಹೊರತು ಬಂಡೆಯು ಯಾರು?
Proverbs 10:30
ನೀತಿವಂತರು ಎಂದಿಗೂ ಕದಲುವದೇ ಇಲ್ಲ; ದುಷ್ಟರು ಭೂಮಿಯಲ್ಲಿ ವಾಸಮಾಡುವದಿಲ್ಲ.
Proverbs 12:7
ದುಷ್ಟರು ಕೆಡವಲ್ಪಟ್ಟು ಇಲ್ಲದೇ ಹೋಗುವರು; ನೀತಿವಂತರ ಮನೆಯು ನಿಲ್ಲುವದು.
Isaiah 45:17
ಆದರೆ ಇಸ್ರಾಯೇಲ್ಯರಾದರೋ ಶಾಶ್ವತವಾದ ರಕ್ಷಣೆಯೊಂದಿಗೆ ಕರ್ತನಲ್ಲಿ ರಕ್ಷಿಸಲ್ಪ ಡುವರು; ನೀವು ಯುಗಯುಗಾಂತರಕ್ಕೂ ನಾಚಿಕೆ ಪಡುವದಿಲ್ಲ ಇಲ್ಲವೆ ಮಾನಭಂಗಪಡುವದಿಲ್ಲ.
Hosea 1:7
ನಾನು ಯೆಹೂದದ ಮನೆತನದವರನ್ನು ಕರುಣಿಸಿ ಅವರನ್ನು ಬಿಲ್ಲಿನಿಂದಲಾದರೂ ಕತ್ತಿಯಿಂದಲಾದರೂ ಯುದ್ಧದಿಂದಲಾದರೂ ಕುದುರೆಗಳಿಂದಲಾದರೂ ಇಲ್ಲವೆ ಕುದುರೆಯ ಸವಾರರಿಂದಲಾದರೂ ರಕ್ಷಿಸು ವದಿಲ್ಲ; ಆದರೆ ಅವರನ್ನು ಅವರ ದೇವರಾದ ಕರ್ತ ನಿಂದ ರಕ್ಷಿಸುವೆನು ಅಂದನು.