Cross Reference
Acts 24:17
ಅನೇಕ ವರುಷಗಳಾದ ಮೇಲೆ ನನ್ನ ಜನಾಂಗಕ್ಕೆ ದಾನಗಳನ್ನೂ ಕಾಣಿಕೆಗಳನ್ನೂ ತರುವದಕ್ಕಾಗಿ ನಾನು ಬಂದೆನು.
Acts 19:21
ಇವುಗಳಾದ ಮೇಲೆ ಪೌಲನು ತಾನು ಮಕೆದೋನ್ಯವನ್ನೂ ಅಖಾಯವನ್ನೂ ಹಾಯ್ದು ಯೆರೂಸಲೇಮಿಗೆ ಹೋಗಬೇಕೆಂದು ಆತ್ಮದಲ್ಲಿ ಉದ್ದೇಶಿಸಿ--ಅಲ್ಲಿಗೆ ಹೋದಮೇಲೆ ನಾನು ರೋಮ್ ವನ್ನು ಸಹ ನೋಡಲೇಬೇಕು ಎಂದು ಹೇಳಿದನು.
Acts 20:22
ಇಗೋ, ನಾನು ಈಗ ಆತ್ಮನಿರ್ಬಂಧವುಳ್ಳವನಾಗಿ ಯೆರೂಸಲೇ ಮಿಗೆ ಹೋಗುತ್ತೇನೆ. ಅಲ್ಲಿ ನನಗೆ ಏನು ಸಂಭವಿಸು ವವೋ ನಾನರಿಯೆ.
Acts 18:21
ಯೆರೂಸಲೇಮಿನಲ್ಲಿ ಬರುವ ಈ ಹಬ್ಬಕ್ಕೆ ನಾನು ಹೇಗಾದರೂ ಅಲ್ಲಿ ಇರತಕ್ಕದ್ದು; ದೇವರ ಚಿತ್ತವಾದರೆ ನಾನು ಹಿಂದಿರುಗಿ ನಿಮ್ಮ ಬಳಿಗೆ ಬರುತ್ತೇನೆ ಎಂದು ಹೇಳಿ ಅವರ ಅಪ್ಪಣೆ ತಕ್ಕೊಂಡು ಎಫೆಸದಿಂದ ಸಮುದ್ರ ಪ್ರಯಾಣಮಾಡಿ ದನು.
Acts 20:16
ಯಾಕಂದರೆ ಪೌಲನು ತನಗೆ ಸಾಧ್ಯವಾದರೆ ಪಂಚಾಶತ್ತಮದ ದಿವಸ ಯೆರೂಸಲೇಮಿನಲ್ಲಿರಬೇಕೆಂದು ಅವಸರ ಪಡುತ್ತಾ ಇದ್ದದರಿಂದ ಆಸ್ಯದಲ್ಲಿ ಕಾಲವನ್ನು ಕಳೆಯು ವದಕ್ಕೆ ಮನಸ್ಸಿಲ್ಲದೆ ಸಮುದ್ರ ಪ್ರಯಾಣವಾಗಿ ಎಫೆಸವನ್ನು ದಾಟಿಹೋಗಬೇಕೆಂದು ತೀರ್ಮಾನಿಸಿ ಕೊಂಡಿದ್ದನು.
Romans 15:26
ಯೆರೂಸಲೇಮಿನಲ್ಲಿರುವ ಬಡವ ರಾದ ಪರಿಶುದ್ಧರಿಗೆ ಸ್ವಲ್ಪ ಸಹಾಯಮಾಡಲು ಮಕೆದೋನ್ಯ ಮತ್ತು ಅಖಾಯದವರು ಇಷ್ಟಪಟ್ಟಿದ್ದಾರೆ.
1 Corinthians 16:1
ಪರಿಶುದ್ಧರಿಗೋಸ್ಕರ ಹಣವನ್ನೆತ್ತುವ ವಿಷಯದಲ್ಲಿ ಗಲಾತ್ಯ ಸಭೆಗಳಿಗೆ ನಾನು ಅಪ್ಪಣೆಕೊಟ್ಟಂತೆ ನೀವೂ ಮಾಡಿರಿ.
Galatians 2:10
ಆದರೆ ನಾವು ಬಡವರನ್ನು ಜ್ಞಾಪಕ ಮಾಡಿ ಕೊಳ್ಳಬೇಕೆಂಬ ಒಂದೇ ವಿಷಯವನ್ನು ಅವರು ಬೇಡಿ ಕೊಂಡರು; ಇದನ್ನು ಮಾಡುವದರಲ್ಲಿ ನಾನೂ ಆಸಕ್ತನಾಗಿದ್ದೆನು.